ಮಂಗಳೂರು: ಗ್ಯಾಂಗ್ ನಿಂದ ಯುವಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ: ಯುವಕನ ಸ್ಥಿತಿ ಚಿಂತಾಜನಕ - Mahanayaka
7:29 PM Thursday 12 - December 2024

ಮಂಗಳೂರು: ಗ್ಯಾಂಗ್ ನಿಂದ ಯುವಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ: ಯುವಕನ ಸ್ಥಿತಿ ಚಿಂತಾಜನಕ

mangalore
20/08/2022

ಮಂಗಳೂರು: ಯುವಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಹೊರವಲಯದ ವಳಚ್ಚಿಲ್ ಎಂಬಲ್ಲಿ ನಡೆದಿದೆ.

ಯುವಕನ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮನೆಗೆ ಸಾಮಾನು ತರಲು ಅಂಗಡಿಗೆ ತೆರಳಿದ್ದ ಮಿಫ್ತಾಹ್ ಎಂಬ ಬಾಲಕನನ್ನು ತಡೆದಿದ್ದ ಗ್ಯಾಂಗ್ ವೊಂದು ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಲು ಯತ್ನಿಸುತ್ತಿದ್ದ ಸಂದರ್ಭ ತಡೆಯಲು ಬಂದ ಯುವಕನ ಮಾವ ಆಸೀಫ್ ಎಂಬುವವರ ಮೇಲೆ ತಂಡ ಏಕಾಏಕಿ ತಲವಾರು ಹಾಗೂ ಇನ್ನಿತರ ಮಾರಕಾಸ್ರ್ತಗಳಿಂದ ದಾಳಿ ನಡೆಸಿದೆ.

ಈ ಘಟನೆಯಲ್ಲಿ ಆಸೀಫ್ ಗಂಭೀರ ಗಾಯಗೊಂಡಿದ್ದು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ದಾಖಲಾಗಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಿಸ್ತಾ, ಮನ್ಸೂರು ಯಾನೆ ಹುಸೈನ್ ಹಾಗೂ ಆಶಿಕ್ ಪ್ರಮುಖ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿ ಆಶಿಕ್ ಎಂಬವನನ್ನು ಬಂಧಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ