ನಾಲಗೆ ಕಟ್ ಮಾಡುತ್ತೇವೆ ಹುಷಾರ್: ಈಶ್ವರಪ್ಪಗೆ ಬೆದರಿಕೆ ಪತ್ರ!
ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ಪತ್ರದಲ್ಲಿ ನಾಲಿಗೆ ಕತ್ತರಿಸುವು ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ನಮ್ಮ ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್ ಬಗ್ಗೆ ನಿನ್ನ ಬಾಯಿಯಿಂದ “ಮುಸ್ಲಿಂ ಗೂಂಡಾ” ಅಂತ ಹೇಳಿದೆಯಲ್ಲ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆ ಬೆನ್ನೂರಿನಲ್ಲಿ ಕಾಲೇಜು ಕಟ್ಟಲು ಬಳಸ್ತಿರುವುದು ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಗಳನ್ನು ಆದರೂ ನಿನಗೆ ಮುಸ್ಲಿಮರು ಬೇಡ. ನಿನಗೆ ನಾಚಿಕೆಯಾಗಬೇಕು. ಮಗನೆ.. ನಿನ್ನ ನಾಲಗೆ ಕಟ್ ಮಾಡುತ್ತೇವೆ ಹುಷಾರ್ ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ.
ಈ ಬಗ್ಗೆ ಮಾತನಾಡಿರುವ ಈಶ್ವರಪ್ಪ ಯಾರೋ ಹೇಡಿಗಳು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ಗೊಡ್ಡು ಬೆದರಿಕೆಗಳಿಗೆಲ್ಲ ನಾನು ಹೆದರಲ್ಲ. ತನಿಖೆ ನಡೆಸಿ ಹೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಪೊಲೀಸರಿಗೆ ದೂರು ನೀಡಿದ್ದೇವೆ. ಕ್ರಮಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ದರೋಡೆ, ಕೊಲೆ ಮಾಡುವ ಮುಸಲ್ಮಾನರಿಗೆ ಗೂಂಡಾ ಎಂದು ಕರೆಯುತ್ತೇನೆ. ಎಲ್ಲ ಮುಸಲ್ಮಾನರಿಗೂ ನಾನು ಹಾಗೆ ಕರೆದಿಲ್ಲ. ಈ ಪತ್ರ ಹೇಡಿತನದ್ದು. ನಾನು ಹೆದರುವುದಿಲ್ಲ. ಯಾವ ಮುಸ್ಲಿಮ್ ಗೂಂಡಾ ಪ್ರವೃತ್ತಿ ಮಾಡ್ತಾರೋ ಅಂಥವರಿಗೆ ಗೂಂಡಾ ಎಂದು ಕರೆಯದೇ, ಒಳ್ಳೆಯವರು ಎಂದು ಕರೆಯಬೇಕೇ? ಎಂದು ಪ್ರಶ್ನಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka