ಬೆಳ್ತಂಗಡಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು
ಬೆಳ್ತಂಗಡಿ : ಆಕಸ್ಮಿಕವಾಗಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗಾಂಧಿನಗರ ಕಾಫಿನಡ್ಕ ತೆಂಕಕಾರಂದೂರು ನಿವಾಸಿ ರಮಾನಂದ(42) ಮೃತಪಟ್ಟವರಾಗಿದ್ದು, ಮನೆ ಸಮೀಪದ ಬಾವಿಗೆ ನಿನ್ನೆ ಮಧ್ಯಾಹ್ನ ಆಕಸ್ಮಿಕವಾಗಿ ಬಿದ್ದಿದ್ದು, ಸಂಜೆವರೆಗೂ ಅವರು ಕಾಣದೇ ಇರುವುದರಿಂದ ಆತಂಕಗೊಂಡು ಮನೆಯವರು ಹುಡುಕಾಡಿದ್ದಾರೆ.
ರಾತ್ರಿ ವೇಳೆ ರಮಾನಂದರ ಚಪ್ಪಲಿ ಬಾವಿ ಸಮೀಪ ಸಿಕ್ಕಿದರಿಂದ ತಕ್ಷಣ ಗ್ರಾ.ಪಂ.ಅಧ್ಯಕ್ಷರಾದ ಹೇಮಂತರವರು ಬೆಳ್ತಂಗಡಿ ಅಗ್ನಿಶಾಮಕದಳಕ್ಕೆ ಮಾಹಿತಿನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕದಳ ಬಂದು ಮೃತದೇಹವನ್ನು ಮೇಲಕ್ಕೆತ್ತಲಾಯಿತು.
ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು. ಕಾರ್ಯಾಚರಣೆಯಲ್ಲಿ ಪ್ರಮುಖ ಅಗ್ನಿಶಾಮಕ ಶ್ರೀ ಕೃಷ್ಣ.ಪಿ. ನಾಯ್ಕ, ಚಾಲಕ ಲಿಂಗರಾಜ್ ಲಮಾಣಿ, ಉಸ್ಮಾನ್, ಮಹಮ್ಮದ್ ಜಂಬಗಿ, ಅರುಣ್ ಪಾಲ್ಗೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka