ಮನುಷ್ಯತ್ವ ಮರೆತ ರಾಜ್ಯ ಸರ್ಕಾರಕ್ಕೆ ಬಿಸಿಮುಟ್ಟಿಸಿದ ಸಾರಿಗೆ ಸಂಸ್ಥೆ ಸಿಬ್ಬಂದಿ
11/12/2020
ಬೆಂಗಳೂರು: ಮನುಷ್ಯತ್ವ ಮರೆತ ರಾಜ್ಯ ಸರ್ಕಾರಕ್ಕೆ ಸಾರಿಗೆ ಸಂಸ್ಥೆ ಸಿಬ್ಬಂದಿ ಬಿಸಿ ಮುಟ್ಟಿಸಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿದ್ದಾರೆ.
ಸಾರಿಗೆ ಸಂಸ್ಥೆಯ ಸಿಬ್ಬಂದಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರೂ ನಿಗಮ ಮೊದಲಾದ ರಾಜಕೀಯ ಆಟದಲ್ಲಿ ತೊಡಗಿರುವ ರಾಜ್ಯ ಸರ್ಕಾರ, ಸಾರಿಗೆ ಸಂಸ್ಥೆಯ ನೌಕರರ ಜೊತೆಗೆ ಅಮಾನವೀಯವಾಗಿ ನಡೆದುಕೊಂಡಿದೆ. ಸರ್ಕಾರವು ಸಾರಿಗೆ ನೌಕರರ ಹೆಂಡತಿ ಮಕ್ಕಳನ್ನು ಬರೀಯ ಹೊಟ್ಟೆಯಲ್ಲಿ ಕೂರುವಂತೆ ಮಾಡಿದ್ದು, ಇದರಿಂದಾಗಿ ನೌಕರರು ರೊಚ್ಚಿಗೆದ್ದಿದ್ದಾರೆ.
ಸಾರಿಗೆ ನೌಕರರು ತಮ್ಮ ಅಳಲನ್ನು ನಿರಂತರವಾಗಿ ತೋಡಿಕೊಂಡಿದ್ದರೂ, ಅವರ ವೇತನ ಕೊಡಿಸುವ ಯೋಗ್ಯತೆ ಪ್ರದರ್ಶಿಸದ ಸಿಎಂ ಯಡಿಯೂರಪ್ಪನವರು ಇಂದು ಯಾವ ಮುಖ ಹೊತ್ತುಕೊಂಡು ಮುಷ್ಕರ ಕೈ ಬಿಡಿ ಎಂದು ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಮನವಿ ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.