ಕೆಲವೇ ಕ್ಷಣಗಳಲ್ಲಿ ಮುರುಗಮಠಕ್ಕೆ ಸ್ವಾಮೀಜಿ ಆಗಮನ! - Mahanayaka
8:12 PM Thursday 12 - December 2024

ಕೆಲವೇ ಕ್ಷಣಗಳಲ್ಲಿ ಮುರುಗಮಠಕ್ಕೆ ಸ್ವಾಮೀಜಿ ಆಗಮನ!

murugashree
29/08/2022

ಫೋಕ್ಸೋ ಪ್ರಕರಣದಲ್ಲಿ ಮುರುಗಶ್ರೀ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  ಕಳೆದ 2 ದಿನಗಳ ಕಾಲ ಸಂಧಾನ ನಡೆದಿತ್ತು ಎನ್ನಲಾಗುತ್ತಿದ್ದು, ಸಂಧಾನದಿಂದ ಯಾವುದೇ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ.

ಸದ್ಯದ ಮಾಹಿತಿ ಪ್ರಕಾರ, ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಸ್ವಾಮೀಜಿ ತೆರಳಿದ್ದರು ಎನ್ನಲಾಗ್ತಿದೆ. ಆದರೆ ಶ್ರೀಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಶ್ರೀಯನ್ನು ವಶಕ್ಕೆ ಪಡೆದು ಚಿತ್ರದುರ್ಗಕ್ಕೆ ಕರೆ ತರುತ್ತಿದ್ದಾರೆ.

ಇನ್ನೂ ಶ್ರೀಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುರುಗ ಮಠದ ಮುಂಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಶ್ರೀಗಳು ವಕೀಲರನ್ನು ಭೇಟಿಯಾಗಲು ಹೋಗುತ್ತಿದ್ದರು. ಅವರು ಕೆಲವೇ ಕ್ಷಣದಲ್ಲಿ ವಾಪಸ್ ಆಗುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಅವರು ಮಠಕ್ಕೆ ಬರುತ್ತಾರೆ ಎಂದು ಮಠದಲ್ಲಿ ಭಕ್ತರು ಹೇಳುತ್ತಿದ್ದಾರೆ.

ಇನ್ನೊಂದೆಡೆ ಮಠದ ವಕೀಲರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ಸ್ವಾಮೀಜಿಗಳನ್ನು ಬಂಧಿಸಿಲ್ಲ, ಅವರು ಕೆಲವೇ ಕ್ಷಣಗಳಲ್ಲಿ ಮಠಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ