ಮುರುಘಾ ಶ್ರೀಗಳ ಸೇವೆಯನ್ನು ದೇಶದ ನಾಯಕರು ಹಾಡಿ ಹೊಗಳಿದ್ದಾರೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಸ್ವಾಮೀಜಿಯ ಸೇವೆಗಳ ಬಗ್ಗೆ ನೆನೆದಿದ್ದಾರೆ.
ಮುರುಘಾ ಶ್ರೀಗಳ ಸೇವೆ ಯಾರೂ ತಳ್ಳಿ ಹಾಕುವಂತಿಲ್ಲ. ಏನಾಗಿದೆಯೋ ಸತ್ಯಾಂಶ ಗೊತ್ತಿಲ್ಲ. ನಮಗೆ ಕಾಣುವುದು ಅವರು ಮಾಡಿದ ಸೇವೆಯಷ್ಟೇ. ದೇಶದ ಎಲ್ಲಾ ನಾಯಕರು ಅವರನ್ನು ಹಾಡಿ ಹೊಗಳಿದ್ದಾರೆ. ಒಳಗಡೆ ಏನು ಷಡ್ಯಂತ್ರ ನಡೆಯುತ್ತಿದೆ ಗೊತ್ತಿಲ್ಲ ಎಂದಿದ್ದಾರೆ.
ಇನ್ನೂ ರಾಮನಗರ ಹೆದ್ದಾರಿ ಜಲಾವೃತಗೊಂಡ ಬಗ್ಗೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, 40% ಕಮಿಷನ್ ಹೊಡೆಯುವುದಷ್ಟೇ ಬಿಜೆಪಿಯ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka