ಖ್ಯಾತ ಚಿಂತಕಿ, ಸಂಶೋಧಕಿ, ಲೇಖಕಿ ವಿಜಯ ಮಹೇಶ್ ಅವರ ಒಂದನೇ ವರ್ಷದ ಪುಣ್ಯ ಸ್ಮರಣೆ - Mahanayaka
10:38 PM Tuesday 10 - December 2024

ಖ್ಯಾತ ಚಿಂತಕಿ, ಸಂಶೋಧಕಿ, ಲೇಖಕಿ ವಿಜಯ ಮಹೇಶ್ ಅವರ ಒಂದನೇ ವರ್ಷದ ಪುಣ್ಯ ಸ್ಮರಣೆ

vijaya mahesh
05/09/2022

ಬೆಂಗಳೂರು: ಕರ್ನಾಟಕದಲ್ಲಿ ಬಹುಜನ ಚಳುವಳಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ವಿಜಯ ಮಹೇಶ್ ಅವರು ನಿಧನರಾಗಿ ಒಂದು ವರ್ಷಗಳಾಗಿದ್ದು,  ಈ ಸಂದರ್ಭದಲ್ಲಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಕಾನ್ಶೀರಾಮ್ ಫೌಂಡೇಷನ್ ನಲ್ಲಿ  ನಡೆಸಲಾಯಿತು.

ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ  ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಪುತ್ರ ಅರ್ಜುನ್ ಚಗವೀರಾ ಮತ್ತು ರಜನಾ ಅರ್ಜುನ್  ಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಭಾಗಿಯಾಗಿದ್ದರು.

ಕರ್ನಾಟಕದಲ್ಲಿ ಬಹುಜನ ಚಳುವಳಿಗೆ ಅಪಾರ ಕೊಡುಗೆ ನೀಡಿದ್ದ ವಿಜಯ ಮಹೇಶ್ ಅವರು, ಖ್ಯಾತ ಚಿಂತಕಿ, ಸಂಶೋಧಕರೂ ಆಗಿದ್ದರು. ಬಹುಜನ ವಿದ್ಯಾರ್ಥಿ ಚಳುವಳಿಯಲ್ಲಿ ಸಕ್ರಿಯರಾಗಿದ್ದ ವಿಜಯ ಮಹೇಶ್ ಅವರನ್ನು ಚಳುವಳಿಯ ವಿದ್ಯಾರ್ಥಿಗಳು “ವಿಜಯಕ್ಕಾ” ಎಂದೇ ಕರೆಯುತ್ತಿದ್ದರು.

ಎನ್.ಮಹೇಶ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ವಿಜಯ ಮಹೇಶ್ ಅವರು ಎನ್.ಮಹೇಶ್ ಅವರ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತವರಾಗಿದ್ದಾರೆ. ವೃತ್ತಿಯಲ್ಲಿ ಅಪೆಕ್ಸ್ ಬ್ಯಾಂಕ್ ನಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದರೂ, ಚಳುವಳಿಯಲ್ಲಿ ಅತ್ಯುನ್ನತ ಹೆಸರು ಗಳಿಸಿದವರು.

ಸಮಾಜ ಪರಿವರ್ತನಾ, ಪ್ರಬುದ್ಧ ಭಾರತ ಮೊದಲಾದ ಪತ್ರಿಕೆಗಳಲ್ಲಿ ವಿಜಯ ಮಹೇಶ್ ಅವರ ಲೇಖನಗಳು ಪ್ರಕಟವಾಗಿದ್ದವು. ಇವರ ಲೇಖನವು ಲಕ್ಷಾಂತರ ವಿದ್ಯಾರ್ಥಿಗಳನ್ನು ಚಳುವಳಿಗೆ ಕರೆತರಲು ದಾರಿ ದೀಪವಾಗಿತ್ತು.  ಇದರ ಜೊತೆಗೆ ‘ಮೂಲನಿವಾಸಿ ಬಹುಜನರ ಇತಿಹಾಸ, ಅಂಬೇಡ್ಕರ್ ಮತ್ತು ಚರಿತ್ರೆಯ ಮರುಶೋಧ, ಹಿಂದುತ್ವದ ಗಾಂಧಿ ಮತ್ತು ಮಾನವತೆಯ ಅಂಬೇಡ್ಕರ್, ವಿಜಯಕ್ಕನ ವಿಚಾರ ಲಹರಿ, ಆಧುನಿಕ ಪುಷ್ಯಮಿತ್ರ, ನೆಲಸ ಮಾತು, ಅಂದದ ಮಗುವಿಗೆ ಚಂದದ ಹೆಸರು ಮೊದಲಾದ ಕೃತಿಗಳನ್ನು ವಿಜಯ ಮಹೇಶ್ ರಚಿಸಿದ್ದರು.

ಬಹುಜನ ವಿದ್ಯಾರ್ಥಿ ಸಂಘಕ್ಕೆ ಇವರ ಪುಸ್ತಕಗಳು ಸ್ಪೂರ್ತಿಯಾಗಿದ್ದವು. ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್ ರಾಮಸ್ವಾಮಿ, ಜ್ಯೋತಿ ಬಾಫುಲೆ, ಸಾವಿತ್ರಿ ಬಾ ಫುಲೆ, ಟಿಪ್ಪು ಸುಲ್ತಾನ್, ಕಾನ್ಶೀರಾಮ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ತಮ್ಮ ಲೇಖನಗಳ ಮೂಲಕ ವಿಜಯ ಮಹೇಶ್ ಅವರು ಬೆಳಕು ಚೆಲ್ಲಿದ್ದರು.

ಕಳೆದ ವರ್ಷ ಸೆಪ್ಟಂಬರ್ 5ರಂದು ಯಾರು ಕೂಡ ನಿರೀಕ್ಷಿಸದ ಸುದ್ದಿಯೊಂದು ಬಂದಿದ್ದು, ಚಳುವಳಿಯ ಪ್ರೀತಿಯ ವಿಜಯಕ್ಕ ಇನ್ನಿಲ್ಲ ಎನ್ನುವ ಸುದ್ದಿ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿನ ಕನಕಪುರದಲ್ಲಿ  ಸ್ಥಾಪಿಸಲಾಗಿರುವ ಕಾನ್ಶಿ ಪೌಂಡೇಷನ್ ನಲ್ಲಿ ವಿಜಯ ಮಹೇಶ್ ಅವರ ಸಮಾಧಿ ಇದ್ದು, ಇಂದಿಗೂ ಅಲ್ಲಿ ಚಳುವಳಿಯ ಜೊತೆಗಾರರು, ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಅಕ್ಕನಿಗೆ ನಮನ ಸಲ್ಲಿಸುತ್ತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ