ಪ್ರವಾಹದಲ್ಲಿ ಸಿಲುಕಿದ್ದ ಮಗು ಮತ್ತು ಬಾಣಂತಿಯನ್ನು ರಕ್ಷಿಸಿದ ಯುವಕರು
ಬೆಳಗಾವಿ: ಪ್ರವಾಹದಲ್ಲಿ ಸಿಲುಕಿದ್ದ 12 ವರ್ಷದ ಮಗು ಹಾಗೂ ಬಾಣಂತಿಯನ್ನು ರಕ್ಷಣೆ ಮಾಡಲಾಗಿರುವ ಘಟನೆ ಗೋಕಾಕ್ ತಾಲೂಕಿನ ಮಾನಿಕವಾಡಿ ಗ್ರಾಮದಲ್ಲಿ ನಡೆದಿದ್ದು, ನಿನ್ನೆ ಸುರಿದ ಭಾರೀ ಮಳೆಗೆ ಸೃಷ್ಟಿಯಾದ ಪ್ರವಾಹದ ವೇಳೆ ಮಗು ಮತ್ತು ತಾಯಿ ಸಂಕಷ್ಟಕ್ಕೆ ಸಿಲುಕ್ಕಿದ್ದರು.
ಗೋಕಾಕ್ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಈ ವೇಳೆ ಮನೆಯೊಂದಕ್ಕೆ ಏಕಾಏಕಿ ಮಳೆಯ ನೀರು ನುಗ್ಗಿದೆ. ಈ ವೇಳೆ ಮನೆಯಲ್ಲಿದ್ದವರು ಮೇಲ್ಛಾವಣಿಯ ಏರಿ ಕುಳಿತಿದ್ದು, ಮಗು ಮತ್ತು ತಾಯಿ ಮನೆಯೊಳಗೆ ಸಿಲುಕಿದ್ದಾರೆ. ಈ ವೇಳೆ ಸ್ಥಳೀಯ ಯುವಕರು ಸಮಯ ಪ್ರಜ್ಞೆ ಮೆರೆದು ತಾಯಿ ಮಗುವನ್ನು ರಕ್ಷಿಸಿದ್ದಾರೆ.
ಸ್ಥಳೀಯ ಯುವಕರು ಮೊದಲು ಮೇಲ್ಛಾವಣಿಯ ಮೇಲೇರಿ ಹಂಚು ತೆಗೆದು ರಕ್ಷಣೆಗೆ ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಮನೆ ಹೊಕ್ಕು, ಒಳಗಡೆ ಸಿಲುಕಿದ್ದ ಮಗು ತಾಯಿಯನ್ನು ರಕ್ಷಣೆ ಮಾಡಿದ್ದಾರೆ.
ಸಮಯಕ್ಕೆ ಸರಿಯಾಗಿ ಸ್ಥಳೀಯ ಯುವಕರು ಧಾವಿಸದೇ ಇದ್ದಿದ್ದರೆ, ಅನಾಹುತವೇ ನಡೆದು ಹೋಗುತ್ತಿತ್ತು. ಯುವಕರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka