ಪ್ರಯಾಣಿಕನ್ನು ಝಾಡಿಸಿ ಒದ್ದು ಬಸ್ಸಿನಿಂದ ಕೆಳಗೆಸೆದ ನಿರ್ವಾಹಕ!
ಪುತ್ತೂರು: ಪ್ರಯಾಣಿಕನೋರ್ವನನ್ನು ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ ಬಸ್ಸಿನಿಂದ ಒದ್ದು ಕೆಳಗೆ ತಳ್ಳಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲದಲ್ಲಿ ನಡೆದಿದ್ದು, ವ್ಯಕ್ತಿ ಮದ್ಯಪಾನ ಮಾಡಿದ್ದಾನೆ ಎನ್ನುವ ಕಾರಣಕ್ಕೆ ನಿರ್ವಾಹಕ ಈ ಕೃತ್ಯ ಎಸಗಿದ್ದು, ಘಟನೆಗೆ ಸಂಬಂಧಿಸಿದಂತೆ ನಿರ್ವಾಹಕನನ್ನು ಅಮಾನತುಗೊಳಿಸಲಾಗಿದೆ.
ಪಡುವನ್ನೂರು ಗ್ರಾಮದ ಪದ್ದಡ್ಕ ನಿವಾಸಿ ಕೃಷ್ಣ ಎಂಬವರು ಪದಡ್ಕಕ್ಕೆ ಹೋಗಲು ಬಸ್ ಹತ್ತಿದ್ದು, ಈ ವೇಳೆ ನಿರ್ವಾಹಕ ಕೃಷ್ಣಪ್ಪ ಅವರನ್ನು ಬಸ್ಸಿನಿಂದ ದೂಡಿ ಹಾಕಲು ಯತ್ನಿಸಿದ್ದು, ಹಲ್ಲೆ ಕೂಡ ನಡೆಸಿದ್ದಾರೆ, ಬಳಿಕ ಕೃಷ್ಣಪ್ಪ ಅವರಿಗೆ ಝಾಡಿಸಿ ಒದ್ದು, ಬಸ್ಸಿನಿಂದ ಕೆಳಗೆ ಹಾಕಿದ್ದು, ಬಳಿಕ ಬಸ್ ಮುಂದಕ್ಕೆ ಚಲಿಸಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ನಿರ್ವಾಹಕನನ್ನು ಅಮಾನತುಗೊಳಿಸಲಾಗಿದೆ.
ಪ್ರಯಾಣಿಕರು ಯಾವ ಸ್ಥಿತಿಯಲ್ಲಿ ಬಸ್ಸಿನಲ್ಲಿ ಬಂದರೂ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಳ್ಳುವ ಅವಕಾಶ ಯಾರಿಗೂ ಇಲ್ಲ, ಸಾರ್ವಜನಿಕರಿಗೆ ಹಲ್ಲೆ ನಡೆಸುವ, ಬೈಯ್ಯುವ, ನಿಂದಿಸುವ ಹಕ್ಕು ಇವರಿಗೆ ಯಾರು ಕೊಟ್ಟಿರೋದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆಯ ಬೆನ್ನಲ್ಲೇ ಇದೀಗ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ. ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯಗಳೂ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka