ಪತಿ, ಮಗನನ್ನು ರಕ್ಷಿಸಲು ನದಿಗೆ ಹಾರಿದ ಮಹಿಳೆ ನೀರುಪಾಲು!: ಪತಿ, ಮಗನ ರಕ್ಷಣೆ
ಬೈಂದೂರು: ಮಗನನ್ನು ರಕ್ಷಣೆ ಮಾಡಲು ನದಿಗೆ ಧುಮುಕಿದ ಪ್ರವಾಸಿ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ಸೆ.10ರಂದು ಕೊಲ್ಲೂರಿನಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಕೇರಳದ ತಿವೇಂಡ್ರಂ ಜಿಲ್ಲೆಯ ಕಾಚಾಗಡ ಗ್ರಾಮದ ನಿವಾಸಿ ಚಾಂದಿ ಶೇಖರ್(42) ಎಂದು ಗುರುತಿಸಲಾಗಿದೆ.
ಇವರು ಪತಿ ಮುರುಗನ್, ಮಗ ಆದಿತ್ಯನ್ ಹಾಗೂ ರಕ್ತ ಸಂಬಂಧಿಗಳೊಂದಿಗೆ ಒಣಂ ಹಬ್ಬದ ಪ್ರಯುಕ್ತ ಕೇರಳದಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರವಾಸ ಕೈಗೊಂಡಿದ್ದರು. ನಿನ್ನೆ ಕೊಲ್ಲೂರು ಯಮುನಾ ವಿಹಾರ್ ವಸತಿ ಗೃಹದಲ್ಲಿ ಉಳಿದುಕೊಂಡಿದ್ದು, ಸಂಜೆ ವೇಳೆ ಕುಟುಂಬದವರೊಂದಿಗೆ ಸೌರ್ಪಾಣಿಕ ಘಟ್ಟಕ್ಕೆ ಹೋಗಿದ್ದರು. ಈ ವೇಳೆ ನದಿದಡದಲ್ಲಿ ಸ್ನಾನ ಮಾಡುತ್ತಿರುವಾಗ ಚಾಂದಿ ಶೇಖರ್ ಅವರ ಪತಿ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು.
ಅವರನ್ನು ರಕ್ಷಣೆ ಮಾಡಲು ಮಗ ಆದಿತ್ಯನ್ ಧುಮುಕಿದ್ದು, ಆತನು ನೀರಿನಲ್ಲಿ ಕೊಚ್ಚಿ ಹೋಗಿದ್ದನು. ಆತನನ್ನು ರಕ್ಷಣೆ ಮಾಡಲು ಈಜು ಬಾರದ ಆತನ ತಾಯಿ ಚಾಂದಿಶೇಖರ್ ನೀರಿಗೆ ಧುಮುಕಿ ನೀರಿನ ಸೆಳತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಪತಿ ಮುರುಗನ್ ಮತ್ತು ಮಗ ಆದಿತ್ಯನ್ ರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾವಲುಗಾರ ಸಾವು; ಅಂತ್ಯಸಂಸ್ಕಾರ
ಉಡುಪಿ: ವಸತಿ ಸಂಕೀರ್ಣದಲ್ಲಿ ಕಾವಲು ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿಯಲ್ಲಿ ಶುಕ್ರವಾರ ನಡೆದಿದೆ. ನಗರ ಠಾಣೆಯ ಮೆಲವಿನ್ ಡಿಸೋಜ ಕಾನೂನು ಪ್ರಕ್ರಿಯೆ ನಡೆಸಿದರು.
ಮೃತ ವ್ಯಕ್ತಿಯನ್ನು ಅಸ್ಸಾಂ ರಾಜ್ಯದ ನಿವಾಸಿ ಪ್ರದೀಪ್ (27) ಎಂದು ಗುರುತಿಸಲಾಗಿದೆ. ಈ ಬಗ್ಗೆ ಸಂಬಂಧಿಕರಿಗೆ ವಿಷಯ ಮುಟ್ಟಿಸಲಾಯಿತು. ಸಂಬಂಧಿಕರಿಗೆ ಅಂತ್ಯಸಂಸ್ಕಾರ ನಡೆಸಲು ಆಸ್ಸಾಂನಿಂದ ಉಡುಪಿಗೆ ಬರಲು ಅಸಹಾಯಕತೆ ಎದುರಾಯಿತು. ಅಸಹಾಯಕತೆ ಸ್ಪಂದಿಸಿದ ನಗರ ಪೊಲೀಸ್ ಠಾಣೆ, ಮೃತನ ಸಂಬಂಧಿಕರಿಂದ ಮೌಖಿಕ ಹಾಗೂ ಮಿಂಚಂಚೆ ಮೂಲಕ ಒಪ್ಪಿಗೆ ಪಡೆದುಕೊಂಡು, ಗೌರಯುತವಾಗಿ ಮೃತ ಕಾವಲುಗಾರನ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದುರುದ್ರ ಭೂಮಿಯಲ್ಲಿ ನಡೆಸಿತು.
ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೆತೃತ್ವದಲ್ಲಿ ಅಂತ್ಯಸಂಸ್ಕಾರ ಕಾರ್ಯಗಳು ನಡೆದವು. ಡೋರತಿ ಆಳ್ವ, ಗಿಲ್ಬರ್ಟ್ ಆಳ್ವ, ಯತೀಶ್ ಸಹಕರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka