ಕೋಡಿ ಹರಿದ ಕೆರೆಯ ಬಳಿ ವಿಡಿಯೋ ಮಾಡಲು ಹೋದ ಯುವತಿಯ ದುರಂತ ಸಾವು
ಚಿಕ್ಕಬಳ್ಳಾಪುರ: ಕೋಡಿ ಹರಿಯುತ್ತಿರುವ ಕೆರೆಯ ಬಳಿ ವಿಡಿಯೋ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿಯೋರ್ವಳು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿ ಬಂಡೆ ತಾಲೂಕಿನ ಗಂಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದ ಅಮೃತಾ(22) ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಜಂಬಿಗೆಮರದಹಳ್ಳಿಯ ಸಂಬಂಧಿಕರ ಮನೆಗೆ ಗೃಹಪ್ರವೇಶಕ್ಕೆ ಆಗಮಿಸಿದ್ದ ಅಮೃತಾ ಗಂಗಾನಹಳ್ಳಿ ಕೆರೆಕೋಡಿ ಹರಿಯುತ್ತಿರುವ ವಿಚಾರ ತಿಳಿದು ಸ್ನೇಹಿತೆ ಜೊತೆಗೆ ತೆರಳಿದ್ದಳು ಎನ್ನಲಾಗಿದೆ.
ಮೊಬೈಲ್ ಸ್ನೇಹಿತೆಯ ಕೈಗೆ ಕೊಟ್ಟು, ಕೆರೆಯ ಅಂಚಿಗೆ ಹೋಗಿ ವಿಡಿಯೋ ಮಾಡಲು ಹೇಳಿದ್ದಳು ಎಂದು ಹೇಳಲಾಗಿದೆ. ಈ ವೇಳೆ ಕಾಲು ಜಾರಿ ಕೆರೆಗೆ ಬಿದ್ದಿದ್ದು, ದುರಂತ ಸಾವಿಗೀಡಾಗಿದ್ದಾಳೆ.
ಇನ್ನೂ ನೀರಿಗೆ ಬಿದ್ದು ಮೃತಪಟ್ಟವರ ಮೃತದೇಹಕ್ಕೆ ಉಪ್ಪು ಹಾಕಿ ಮಲಗಿಸಿದರೆ, ಬದುಕುತ್ತಾರೆ ಅನ್ನೋ ಸಾಮಾಜಿಕ ಜಾಲತಾಣದ ಫೇಕ್ ಪೋಸ್ಟ್ ನಂಬಿದ ಅಮಾಯಕ ಜನರು ಅಮೃತಾ ಮೃತದೇಹವನ್ನು ಉಪ್ಪಿನಲ್ಲಿ ಮಲಗಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka