ಆಪರೇಷನ್ ನೆಪದಲ್ಲಿ ಮಹಿಳೆಯ ಎರಡೂ ಕಿಡ್ನಿ ಕಳವು!
ಪಾಟ್ನಾ: ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋಗಿದ್ದ ಮಹಿಳೆಗೆ ಆಪರೇಷನ್ ನಡೆಸುವ ನೆಪದಲ್ಲಿ ಎರಡೂ ಕಿಡ್ನಿಗಳನ್ನು ಕಳವು ಮಾಡಿರುವ ಆಘಾತಕಾರಿ ಘಟನೆ ಬಿಹಾರದ ಮುಜಾಫರ್’ಪುರ್ ಜಿಲ್ಲೆಯಲ್ಲಿ ನಡೆದಿದೆ.
ಬಾಜಿರೌತ್ ನಿವಾಸಿ ಲಾಲ್ ದೇವ್ ರಾಮ್ ಅವರ ಪುತ್ರಿ ಸುನೀತಾ ದೇವಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಬರಿಯಾರ್’ಪುರ ಖಾಸಗಿ ಕ್ಲಿನಿಕ್ ಗೆ ಕರೆದೊಯ್ಯಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಆಪರೇಷನ್ ಮಾಡಬೇಕು ಎಂದು ಹೇಳಿದ್ದರು. 20 ಸಾವಿರ ರೂಪಾಯಿ ಬಿಲ್ ಕಟ್ಟಿಸಿಕೊಂಡು ಆಪರೇಷನ್ ಕೂಡ ನಡೆಸಲಾಗಿತ್ತು. ಆದರೆ ಆಪರೇಷನ್ ಬಳಿಕ ಮಹಿಳೆಯ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿದ್ದರಿಂದಾಗಿ ಕುಟುಂಬಸ್ಥರು ಮತ್ತೊಂದು ಆಸ್ಪತ್ರೆಗೆ ಆಕೆಯನ್ನು ರವಾನಿಸಿದ್ದಾರೆ.
ಬೇರೆ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ಮಹಿಳೆಯ ಎರಡೂ ಕಿಡ್ನಿಗಳನ್ನು ಕಳವು ಮಾಡಲಾಗಿರುವ ವಿಚಾರ ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಮಹಿಳೆಯ ಕುಟುಂಬಸ್ಥರು ಕ್ಲಿನಿಕ್ ಮುಂಭಾಗದಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ.
ಸದ್ಯ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದು, ವೈದ್ಯಕೀಯ ಪರೀಕ್ಷೆಯ ಮಾಹಿತಿ ಪಡೆಯುತ್ತಿದ್ದಾರೆ. ಮಹಿಳೆಗೆ ವಂಚನೆಯಾಗಿರೋದು ಖಚಿತವಾದಲ್ಲಿ ಮುಂದಿನ ಕ್ರಮಜರುಗಿಸಲು ಪೊಲೀಸರು ಮುಂದಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka