ಕ್ಲಿನಿಕ್ ಬಾಗಿಲು ತಡವಾಗಿ ತೆರೆದಿದ್ದಕ್ಕೆ ವೈದ್ಯರಿಗೆ ಹಿಗ್ಗಾಮುಗ್ಗಾ ಥಳಿತ!
ಮುಂಬೈ: ಕ್ಲಿನಿಕ್ ಬಾಗಿಲು ತಡವಾಗಿ ತೆರೆದಿದ್ದಕ್ಕೆ ಗುಂಪೊಂದು ವೈದ್ಯ ಹಾಗೂ ಅವರ ಪುತ್ರನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಯುವರಾಜ್ ಗಾಯಕ್ವಾಡ್ ಎಂಬ ವೈದ್ಯರು ಹಲ್ಲೆಗೊಳಗಾದವರಾಗಿದ್ದು, ಇವರ ಮನೆಯ ಎದುರೇ ಕ್ಲಿನಿಕ್ ಇದೆ. ಕ್ಲಿನಿಕ್ ನ ಬಾಗಿಲು ತಡವಾಗಿ ತೆರೆದಿದ್ದರಿಂದ ತಾಳ್ಮೆ ಕಳೆದುಕೊಂಡ ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದು, ತಡೆಯಲು ಯತ್ನಿಸಿದ ಅವರ ಪುತ್ರನ ಮೇಲೆಯೇ ಹಲ್ಲೆ ನಡೆಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆನಂದ್ ಅಲಿಯಾಸ್ ಅನಿಲ್, ಜಗತಾಪ್, ವಿಶ್ವಜೀತ್ ಜಗತಾಪ್, ಅಶೀಕ್ ಜಗಯಾಪ್ ಮತ್ತು ಭೂಷಣ್ ಜಗತಾಪ್ ಎಂಬವರು ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka