ಸುರತ್ಕಲ್’ನ ಭಯಾನಕ ಅಂಡರ್ ಪಾಸ್: ಪೂರ್ತಿ ಕತ್ತಲು ತುಂಬಿರುವ ಅಂಡರ್ ಪಾಸ್
ಅಭಿವೃದ್ಧಿ ಹೆಸರಿನಲ್ಲಿ ಮಾಡುವ ಕಾಮಗಾರಿ ಹೆಚ್ಚಿನವು ಕಳಪೆಯಾಗಿರುತ್ತದೆ ಎಂಬ ಆರೋಪ ಇಂದು ನಿನ್ನೆಯದಲ್ಲ. ಇದಕ್ಕೆ ಸಾಕ್ಷಾತ್ ಉದಾಹರಣೆ ಸುರತ್ಕಲ್ ಬಳಿ ನಿರ್ಮಾಣಗೊಂಡಿರುವ ಅಂಡರ್ ಪಾಸ್.
ಮಂಗಳೂರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ವಿದ್ಯಾದಾಯಿನಿ ಶಾಲೆ ಬಳಿ ರಸ್ತೆ ಸಂಚಾರಕ್ಕೆ ಅನುಕೂಲಕರವಾಗಲೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂಡರ್ ಪಾಸ್ ನಿರ್ಮಾಣ ಮಾಡಿದೆ. ಆದರೆ ನಿರ್ಮಾಣ ಮಾಡಿದ ಬಳಿಕ ಇದರ ನಿರ್ವಹಣೆ ಸರಿಯಾಗದ ಕಾರಣ ಈ ಅಂಡರ್ ಪಾಸ್ ಮೂಲಕ ಹೋಗಲು ಜನರು ಭಯಪಡುವಂತಾಗಿದೆ.
ಇಲ್ಲಿ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಅಂಡರ್ ಪಾಸ್ ಮೂಲಕ ಹೋಗುತ್ತಾರೆ. ಆದರೆ ಕೆಲ ದಿನಗಳಿಂದ ಸುರಿದ ಮಳೆಗೆ ಅಂಡರ್ ಪಾಸ್ ದಾರಿಯಲ್ಲಿ ನೀರು ತುಂಬಿಕೊಂಡಿದ್ದು, ಇನ್ನೊಂದು ಕಡೆಗೆ ದಾಟಲಾಗುತ್ತಿಲ್ಲ. ಅದ್ರಲ್ಲಿ ಮಕ್ಕಳಂತೂ ಇದರ ಒಳಗಡೆ ಹೋಗಲು ಭಯ ಪಡುತ್ತಿದ್ದಾರೆ. ಅಲ್ಲದೇ ಇದರ ಒಳಗಡೆ ಪೂರ್ತಿ ಕತ್ತಲು ತುಂಬಿಕೊಂಡಿದೆ. ವಿದ್ಯುತ್ ಬೆಳಕಿನ ವ್ಯವಸ್ಥೆ ಕೂಡಾ ಇಲ್ಲ. ಒಂದು ವೇಳೆ ಸುಲಭದ ದಾರಿ ಎಂದು ರಸ್ತೆ ಮೇಲ್ಭಾಗದಿಂದ ದಾಟಿದರೆ ಅಪಾಯ ಗ್ಯಾರಂಟಿ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka