ಮೇಲ್ಜಾತಿಯವರ ಕೊಡದಿಂದ ನೀರು ಕುಡಿದಿದ್ದಕ್ಕೆ ದಲಿತನಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ
ಜೈಸಲ್ಮೇರ್: ಮೇಲ್ಜಾತಿಯವರ ನೀರಿನ ಕೊಡದಿಂದ ನೀರು ಕುಡಿದ ದಲಿತ ವ್ಯಕ್ತಿಯೊಬ್ಬರಿಗೆ ಜಾತಿವಾದಿಗಳ ಗುಂಪೊಂದು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ದಿಗ್ಗಾ ಗ್ರಾಮದಲ್ಲಿ ನಡೆದಿದೆ.
ಚತುರಾ ರಾಮ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಇವರು ತಮ್ಮ ಪತ್ನಿಯ ಜೊತೆಗೆ ದಿಗ್ಗಾ ಗ್ರಾಮಕ್ಕೆ ಬಂದಿದ್ದರು, ಜೋರಾಗಿ ಬಾಯಾರಿಕೆಯಾಗಿದ್ದರಿಂದಾಗಿ ಸಾರ್ವಜನಿಕರಿಗಾಗಿ ಇಡಲಾಗಿದ್ದ ನೀರಿನ ಕೊಡದಿಂದ ನೀರು ಕುಡಿದಿದ್ದರು. ಆದರೆ. ಈ ವೇಳೆ ಜಾತಿ ಪೀಡೆಗಳ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಬ್ಬಿಣದ ರಾಡ್, ಕೋಲುಗಳಿಂದ ಅಮಾನವೀಯವಾಗಿ ಥಳಿಸಿದ್ದಾರೆ.
ಹಲ್ಲೆಯಿಂದಾಗಿ ಗಾಯಗೊಂಡಿರುವ ಚತುರ ರಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಸಂತ್ರಸ್ತ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka