ದಲಿತ್ ಸೇವಾ ಸಮಿತಿಯ ಕರೋಪಾಡಿ ಗ್ರಾಮ ಶಾಖೆಯ ಅಧ್ಯಕ್ಷರಾಗಿ ನಾರಾಯಣ ನಾಯ್ಕ ಪೆರ್ನೆ ಮುಗೇರು ಆಯ್ಕೆ
ವಿಟ್ಲ: ದಲಿತ್ ಸೇವಾ ಸಮಿತಿಯ ಕರೋಪಾಡಿ ಗ್ರಾಮ ಶಾಖೆಯನ್ನು ಇತ್ತೀಚಿಗೆ ಪೆರ್ನೆ ಮುಗೇರು ಸಮುದಾಯ ಭವನ ದಲ್ಲಿ ರಚಿಸಲಾಯಿತು.
ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಹಾಗೂ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ ಅವರ ನೇತೃತ್ವದಲ್ಲಿ ಶಾಖೆಯ ರಚನೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಮಾಧವ ನಾಯ್ಕ, ಅಧ್ಯಕ್ಷರಾಗಿ ನಾರಾಯಣ ನಾಯ್ಕ ಪೆರ್ನೆ ಮುಗೇರು, ಸಂಚಾಲಕರಾಗಿ ಹರೀಶ್ ಮತ್ತು ಆನಂದ ಪೆರ್ನೆ ಮುಗೇರು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಹಾಬಲ ನಾಯ್ಕ, ಕಾರ್ಯದರ್ಶಿಯಾಗಿ ರಘುನಾಥ್, ಜತೆಕಾರ್ಯದರ್ಶಿ ಚಿತ್ರಾ, ಕೋಶಾಧಿಕಾರಿ ಶಾರದಾ ಆಯ್ಕೆಯಾಗಿದ್ದಾರೆ.
ಈ ವೇಳೆ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಸಮಿತಿಯ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಳ್ಳಾಲ ಶಾಖೆಯ ಅಧ್ಯಕ್ಷ ನಾಗೇಶ್ ಮುಡಿಪು, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮತ್ತು ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka