ಶಾಲೆಯ ಲಿಫ್ಟ್ ಡೋರ್ ನಲ್ಲಿ ಸಿಲುಕಿ ಶಿಕ್ಷಕಿಯ ದಾರುಣ ಸಾವು - Mahanayaka
8:20 AM Saturday 8 - February 2025

ಶಾಲೆಯ ಲಿಫ್ಟ್ ಡೋರ್ ನಲ್ಲಿ ಸಿಲುಕಿ ಶಿಕ್ಷಕಿಯ ದಾರುಣ ಸಾವು

jenel fernandes
17/09/2022

ಮುಂಬೈ: ಶಾಲೆಯ ಲಿಫ್ಟ್ ಡೋರ್ ಗೆ ಸಿಲುಕಿ ಶಿಕ್ಷಕಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮುಂಬೈಯ ಮಲಾದ್ ಸೆಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ನಡೆದಿದೆ.

ಜೆನೆಲ್ ಫೆರ್ನಾಂಡಿಸ್(26) ಮೃತಪಟ್ಟ ಶಿಕ್ಷಕಿಯಾಗಿದ್ದು, 6ನೇ ಮಹಡಿಯಿಂದ ಎರಡನೇ ಮಹಡಿಯಲ್ಲಿರುವ ಸ್ಟಾಪ್ ರೂಮ್ ಗೆ ಹೋಗಲು ಯತ್ನಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಶಿಕ್ಷಕಿ ಲಿಫ್ಟ್ ಒಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ಲಿಫ್ಟ್ ಡೋರ್ ಕ್ಲೋಸ್ ಆಗಿ ಚಾಲನೆಗೊಂಡಿದೆ. ಪರಿಣಾಮವಾಗಿ ಲಿಫ್ಟ್ ಡೋರ್ ನಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿ ಸಾವನ್ನಪ್ಪಿದ್ದಾರೆ.

ತಕ್ಷಣವೇ ಜೆನೆಲ್ ಅವರನ್ನು ರಕ್ಷಿಸಲು ಸಿಬ್ಬಂದಿ ಮುಂದಾಗಿದ್ದರೂ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ