ಅಂಗಡಿಯ ಮೇಲ್ಭಾವಣಿಯ ಶೀಟು ತೆಗೆದು 2 ಕ್ವಿಂಟಾಲ್ ಅಡಿಕೆ ಕಳವು

ಬೆಳ್ತಂಗಡಿ; ನಗರದ ಅಡಿಕೆ ಅಂಗಡಿಯ ಮೇಲ್ಭಾವಣಿಯ ಶೀಟು ತೆಗೆದು ಅಂಗಡಿಗೆ ನುಗ್ಗಿ ಅಡಿಕೆ ಕಳ್ಳತನ ನಡೆಸಿರುವ ಘಟನೆ ಸಂಭವಿಸಿದೆ.
ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ನೀರಿನ ಟ್ಯಾಂಕಿಗೆ ಹೋಗುವ ರಸ್ತೆಯ ರಸ್ತೆ ಬದಿಯಲ್ಲಿರುವ ಶ್ರೀ ದುರ್ಗಾ ಸುಪಾರಿ ಟ್ರೇಡರ್ಸ್ ಅಂಗಡಿಯಲ್ಲೇ ಕಳ್ಳತನ ನಡೆದಿದೆ. ಸುಮಾರು ಎರಡು ಕ್ವಿಂಟಾಲ್ ಅಡಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕಳ್ಳತನ ಮಾಡಲಾಗಿದೆ.
ಅಂಗಡಿಯ ಸಿಮೆಂಟ್ ಶೀಟ್ ಜಾರಿರುವುದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ಅಡಿಕೆ ಕಳವಾಗಿರುವುದು ಕಙಡು ಬಂದಿದೆ. ಕಳ್ಳತನಕ್ಕೆ ಉಪಯೋಗಿಸಿದ ಕಬ್ಬಿಣದ ಏಣಿಯನ್ನೂ ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಬೆಳ್ತಂಗಡಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರಿಗೆ ಕಳ್ಳನ ಬಗ್ಗೆ ಸುಳಿವು ಲಭಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ನಗರದಲ್ಲಿ ಕಳೆದ ಎರಡು ಮೂರು ತಿಂಗಳಿನಲ್ಲಿ ಹಲವಾರು ಕಳ್ಳತನಗಳಾಗಿದ್ದು ಅದರಲ್ಲಿಯೂ ಅಡಿಕೆ ಅಂಗಡಿಗಳಲ್ಲಿ ಆಗಿರುವ ಕಳ್ಳತನಗಳ ಹಿಂದೆ ಇದೇ ತಂಡ ಇರುವ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka