ದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದೇವರ ದರ್ಶನ ಮಾಡುವುದಕ್ಕೆ ಆಕ್ಷೇಪ - Mahanayaka
7:27 AM Saturday 14 - December 2024

ದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದೇವರ ದರ್ಶನ ಮಾಡುವುದಕ್ಕೆ ಆಕ್ಷೇಪ

subrahmanya kolluru
23/09/2022

ದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದೇವರ ದರ್ಶನ ಮಾಡುವುದುಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಇದರ ಫಲಕ ತೆರವಿಗೆ ಮನವಿ ಮಾಡಲಾಗಿದೆ.

ಈ ಕುರಿತು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ಸಲ್ಲಿಕೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಮಣ್ಯ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯದ ವಿರುದ್ಧ ದೂರು ನೀಡಲಾಗಿದೆ. ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಿಂದ ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ನೀಡಲಾಗಿದೆ.

ಹಿಂದೂ ಸಂಪ್ರದಾಯದಲ್ಲಿ ಇಂತಹ ಪದ್ದತಿ ಇಲ್ಲ, ದಿವ್ಯಾಂಗರು ಬಟ್ಟೆ ಕಳಚಿ ದರ್ಶನ ಪಡೆಯುವುದು ಕಷ್ಟವಾಗುತ್ತದೆ. ಚರ್ಮರೋಗವಿದ್ದವರು ಅಂಗಿ ಕಳಚಿದರೆ ಚರ್ಮರೋಗ ಬೇರೆಯವರಿಗೂ ಹರಡುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದು ಸಂವಿಧಾನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಕೂಡಲೇ ದೇವಾಲಯಗಳಲ್ಲಿ ಅಂಗಿ ಬನಿಯನ್ ತೆಗೆದು ದೇವರ ದರ್ಶನ ಮಾಡಬೇಕು ಎಂಬ ಸೂಚನಾ ಫಲಕ ತೆರವುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ