ಸದನದಲ್ಲಿ ತಾಳ್ಮೆ ಕಳೆದುಕೊಂಡ ಸ್ಪೀಕರ್ ಕಾಗೇರಿ: ಶಾಸಕ ಅನ್ನದಾನಿ ವಿರುದ್ಧ ಗರಂ
ಬೆಂಗಳೂರು: ಬಿಎಂಎಸ್ ಕಾಲೇಜು ಟ್ರಸ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಜೆಡಿ ಎಸ್ ಪಕ್ಷದ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಪ್ರತಿಭಟನೆಯ ಭರದಲ್ಲಿ ಅನ್ನದಾನಿ ಸಭಾಧ್ಯಕ್ಷರ ಪೀಠದ ಕಟ್ಟೆಯನ್ನು ಹತ್ತಿದ್ದು, ಇದರಿಂದ ಆಕ್ರೋಶಗೊಂಡ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಏ… ಅನ್ನದಾನಿ, ಕೆಳಗಿಳಿರೀ… ಲೆಕ್ಚರರ್ ಅಂತ ಹೇಳ್ತಿರಿ, ನಿಮ್ಗೆ ಮಿನಿಮಮ್ ಕಾಮನ್ ಸೆನ್ಸ್ ಕೂಡ ಇಲ್ವಾ ಎಂದುಪ್ರಶ್ನಿಸಿದರು
ಮೇಲಕ್ಕೆ ಯಾಕೆ ಹತ್ತುತ್ತೀರಿ? ಅನ್ನದಾನಿ, ಅತಿಯಾಯ್ತು ಇದು. ಈ ರೀತಿ ಮಾಡ್ಬರ್ದು. ಕೆಳಗೆ ಏನಾದ್ರೂ ಮಾಡಿಕೊಳ್ಳಿ ನೀವು. ತಮಾಷೆ ಮಾಡ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka