ಪಿಎಫ್ ಐ ನಿಷೇಧ ಹಿನ್ನೆಲೆ: ಬಂಧಿತ ಪಿಎಫ್ ಐ ಮುಖಂಡರ ಬಿಡುಗಡೆ
ಮಂಗಳೂರು: ಪಿಎಫ್ ಐ ಸಂಘಟನೆಯನ್ನು ನಿಷೇಧಿಸುವ ಮುನ್ನಾ ದಿನ ಮುಂಜಾಗ್ರತಾ ಕ್ರಮವಾಗಿ ಬಂಧಿಸಲ್ಪಟ್ಟ ಪಿಎಫ್ ಐ ಮತ್ತು ಎಸ್ ಡಿಪಿಐನ ಹತ್ತಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರಿಗೆ ನ್ಯಾಯಾಲಯ ಜಾಮೀನು ನೀಡಿ, ಬಿಡುಗಡೆಗೆ ಆದೇಶಿಸಿದೆ.
ಮುಹಮ್ಮದ್ ಶರೀಫ್ ಪಾಂಡೇಶ್ವರ, ಕುದ್ರೋಳಿ ನಿವಾಸಿಗಳಾದ ಮುಝೈರ್ , ಮುಹಮ್ಮದ್ ನೌಫಲ್ ಹಂಝಾ, ತಲಪಾಡಿ ಕೆ.ಸಿ.ನಗರದ ಶಬ್ಬೀರ್ ಅಹ್ಮದ್, ನವಾಝ್ ಉಳ್ಳಾಲ, ಉಳಾಯಿಬೆಟ್ಟು ಮುಹಮ್ಮದ್ ಇಕ್ಬಾಲ್, ಕೃಷ್ಣಾಪುರದ ದಾವೂದ್ ನೌಶಾದ್, ಕೆ.ಪಿ.ನಗರದ ನಝೀರ್ ಮುಹ್ಮಮದ್, ಇಸ್ಮಾಯೀಲ್ ಇಂಜಿನಿಯರ್, ಇಬ್ರಾಹೀಂ ಮೂಡಬಿದರೆ ಅವರಿಗೆ ಮಂಗಳೂರು ತಹಶೀಲ್ದಾರ್ ಮತ್ತು ಉಳ್ಳಾಲ ತಹಶೀಲ್ದಾರ್ ನ್ಯಾಯಾಲಯ ಜಾಮೀನು ನೀಡಿದೆ. .
ಅಲ್ಲದೇ ಪುತ್ತೂರು ತಾಲೂಕಿನಲ್ಲಿ 1, ಬಂಟ್ವಾಳದಲ್ಲಿ 3, ಮೂಡಬಿದರೆಯಲ್ಲಿ ಇಬ್ಬರು ಮುಖಂಡರನ್ನು ಬಿಡುಗಡೆ ಮಾಡಲಾಗಿದೆ. ಇವರನ್ನು ಸೆ.27ರಂದು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka