154 ಹಾಡುಗಳನ್ನು ಹಾಡಿ 50x53 ಅಡಿ ಗಾತ್ರದ ಬೃಹತ್ ಗಾಂಧಿಯ ಚಿತ್ರ ರಚಿಸಿದ ಶಿಕ್ಷಕ ದಂಪತಿ - Mahanayaka

154 ಹಾಡುಗಳನ್ನು ಹಾಡಿ 50×53 ಅಡಿ ಗಾತ್ರದ ಬೃಹತ್ ಗಾಂಧಿಯ ಚಿತ್ರ ರಚಿಸಿದ ಶಿಕ್ಷಕ ದಂಪತಿ

ulaibettu
02/10/2022

ಮಂಗಳೂರಿನ ಉಳಾಯಿಬೆಟ್ಟು ಗ್ರಾಮದ ವಿಶಾಲ್ ಗಾರ್ಡನ್‌ ನಲ್ಲಿ ಅಕ್ಷತಾ ಮತ್ತು ಚೇತನ್ ಎಂಬ ಶಿಕ್ಷಕ ದಂಪತಿ, 154 ಹಾಡುಗಳನ್ನು ಹಾಡಿ 50×53 ಅಡಿ ಗಾತ್ರದ ಬೃಹತ್ ಗಾಂಧೀಜಿಯ ಚಿತ್ರ ರಚಿಸುವುದರರೊಂದಿಗೆ On the way ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಉತ್ತರ ವಲಯದ ಶಾಸಕ ಭರತ್ ಶೆಟ್ಟಿ ಚಿತ್ರವನ್ನು ವೀಕ್ಷಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್, ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಕಲಾವಿದ ಮೆಹಬೂಬ್ ನಿನಾಸಂ ಹಾಗೂ ಊರಿನ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

ulaibettu

ಇಂದಿನಿಂದ ಆರಂಭಗೊಂಡ On the way ಶಿಕ್ಷಣ ಚಾರಣದ ಮೊದಲ ಕಾರ್ಯಕ್ರಮ ಉಳಾಯಿಬೆಟ್ಟು ಗ್ರಾಮದ ವ್ಯಾಪ್ತಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಚಿಂತಕರಾದ ಗೋಪಾಡ್ಕರ್ ಮಾತನಾಡಿ, ಜಗತ್ತಿಗೆ ಶ್ರೇಷ್ಠರಾಗಬೇಕಾದ ಮಕ್ಕಳು ಪುಸ್ತಕಗಳಲ್ಲಿ ಕಳೆದು ಹೋಗದಿರಲಿ ಎಂದು ಆಶಿಸಿದರು.

On the way ಕಾರ್ಯಕ್ರಮದ ರೂವಾರಿಗಳಾದ ಅಕ್ಷತಾ ಚೇತನ್ ಹಾಡಿನೊಂದಿಗೆ ಪೋಷಕರೊಡನೆ ಸಂವಾದ ನಡೆಸಿದರು. ನಡುಬೀದಿಯನ್ನೇ ವೇದಿಕೆಯನ್ನಾಗಿಸಿ ಜನರೊಡನೆ ನಡೆಸಿದ ಸಂವಾದ ವಿಶಿಷ್ಟವಾಗಿತ್ತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಇಸಾಕ್ ಮತ್ತು ಅಜರುದ್ದೀನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಮೆಹಬೂಬ್ ನಿನಾಸಂ, ರೂಪೇಶ್ ನಂದಿಹಳ್ಳಿ, ಶಿಕ್ಷಕಿ ಗೀತಾರವರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ