ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು: ಅಣ್ಣ– ತಂಗಿಯ ದಾರುಣ ಸಾವು
![sullia](https://www.mahanayaka.in/wp-content/uploads/2022/10/sullia.jpg)
ಸುಳ್ಯ: ಸ್ಕೂಟಿಗೆ ಮಾರುತಿ ಕಾರು ಢಿಕ್ಕಿಯಾದ ಪರಿಣಾಮ ಅಣ್ಣ-ತಂಗಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ನಡೆದಿದೆ.
ಸ್ಕೂಟಿ ಚಲಾಯಿಸುತ್ತಿದ್ದ ಬಾಲಕ ಅಪಘಾತ ನಡೆದು ಕೆಲ ಸಮಯದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ತಂಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ.
ಬಾಜಿನಡ್ಕದ ದೇವಿಪ್ರಸಾದ್ ಅವರ ಮಕ್ಕಳಾದ ನಿಶಾಂತ್ ಮತ್ತು ಮೋಕ್ಷಾ ಸಾವನ್ನಪ್ಪಿದವರಾಗಿದ್ದು, ನಿಶಾಂತ್ ಚಲಾಯಿಸುತ್ತಿದ್ದ ಸ್ಕೂಟಿಗೆ ಎಲಿಮಲೆ ಮತ್ತು ಜಬಳೆ ಮಧ್ಯೆ ಮಾರುತಿ 800 ಕಾರು ಢಿಕ್ಕಿ ಹೊಡೆದಿದೆ.
ಮೃತ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಮೋಕ್ಷಾ ದೇವಚಳ್ಳ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.
ಘಟನೆ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka