ಪಿಸ್ತೂಲ್, ಕತ್ತಿ, ಚಾಕು ಇಟ್ಟು ಆಯುಧ ಪೂಜೆ ಮಾಡಿದ ಮುತಾಲಿಕ್
05/10/2022
ಉಡುಪಿ: ಉಡುಪಿ ಶ್ರೀರಾಮಸೇನೆ ಪ್ರಾಂತ ಅಧ್ಯಕ್ಷರ ಮನೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾರಕಾಸ್ತ್ರಗಳಾದ ಎರಡು ಪಿಸ್ತೂಲ್, ಕತ್ತಿ, ಚಾಕುಗಳಿಗೆ ಪೂಜೆ ಸಲ್ಲಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಎಲ್ಲರಿಗೂ ನವರಾತ್ರಿ ದಸರಾದ ಶುಭಾಶಯಗಳು. ಹಿಂದುತ್ವ ಮತ್ತು ಭಾರತದ ಉಳಿವಿಗಾಗಿ ದುರ್ಗಾಮಾತೆಯ ಪೂಜೆ ಮಾಡಿದ್ದೇವೆ. ಎಲ್ಲರೂ ಇದೇ ಮಾದರಿಯಲ್ಲಿ ಆಯುಧ ಪೂಜೆ ಮಾಡಿ. ಭಾರತ ಮಾತೆಯ ಉಳಿವಿಗಾಗಿ ಕ್ಷಾತ್ರತ್ವ ಬೆಳೆಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀರಾಮ್ ಸೇನೆ ಮುಖಂಡ ಮೋಹನ್ ಭಟ್, ಜಿಲ್ಲಾಧ್ಯಕ್ಷ ಜಯರಾಮ್ ಅಂಬೇಕಲ್ಲು ಮತ್ತಿತರರು ಭಾಗಿಯಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka