ಕಾಂತಾರದಲ್ಲಿ ಬೂತಾರಾಧನೆಗೆ ಅವಮಾನಿಸಲಾಯಿತೇ?: ಸಾಮಾಜಿಕ ಜಾಲತಾಣಗಳಲ್ಲಿ ನಡಿತಿರೋ ಚರ್ಚೆಗಳೇನು? - Mahanayaka

ಕಾಂತಾರದಲ್ಲಿ ಬೂತಾರಾಧನೆಗೆ ಅವಮಾನಿಸಲಾಯಿತೇ?: ಸಾಮಾಜಿಕ ಜಾಲತಾಣಗಳಲ್ಲಿ ನಡಿತಿರೋ ಚರ್ಚೆಗಳೇನು?

kanthara
05/10/2022

ಯಶಸ್ವಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಟನೆಯ ‘ಕಾಂತರ’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಮ್ಮ ನೆಲ ಮೂಲದ ಕಥೆಗಳಿಗೆ ಸಿನಿ ಪ್ರೇಕ್ಷಕರು ಹೆಚ್ಚು ಮಿಡಿಯುತ್ತಾರೆ ಅನ್ನೋದನ್ನು ರಿಷಬ್ ಶೆಟ್ಟಿ ನಿರ್ದೇಶನ, ನಟನೆಯ ಕಾಂತರ ಸಾಬೀತುಪಡಿಸಿದೆ.


Provided by

ಈಗಾಗಲೇ ತಮಿಳು, ಮಲಯಾಳಂ ಚಿತ್ರರಂಗ ನೆಲಮೂಲದ ಕಥೆಗಳನ್ನು ತೆಗೆದು ಯಶಸ್ವಿಯಾಗಿದ್ದಾರೆ. ಇದೇ ಸಾಲಿಗೆ ಇದೀಗ ಕಾಂತರ ಚಿತ್ರ ಕೂಡ ಸೇರ್ಪಡೆಯಾಗಿದ್ದು, ಸತತ 6ನೇಯ ದಿನವೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಕಾಂತಾರ ಚಿತ್ರವನ್ನು ಫ್ಯಾನ್ ಇಂಡಿಯಾ ಚಿತ್ರವಾಗಿ ತರಬಹುದಿತ್ತು ಎನ್ನುವ ಅಭಿಪ್ರಾಯಗಳು ಕೂಡ ವ್ಯಾಪಕವಾಗಿ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಂತರ ಚಿತ್ರ ಪ್ರಧಾನ ಚರ್ಚ ವಿಷಯವೂ ಆಗಿದ್ದು, ‘ಬೂತಾರಾಧನೆ’ ಹಾಗೂ ಕರಾವಳಿಯ ಜನರ ಸಂಘರ್ಷದ ಬದುಕನ್ನು ಕಟ್ಟಿಕೊಟ್ಟಿರುವ ಚಿತ್ರಕ್ಕೆ ಸಿನಿಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ದೊರಕಿದೆ. ಚಿತ್ರವು ಕೇವಲ ಮನರಂಜನೆ ಮಾತ್ರವಲ್ಲದೇ, ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದೆ ಎನ್ನುವ ವಿಮರ್ಶೆಯ ಮಾತುಗಳು ಕೇಳಿ ಬಂದಿವೆ.


Provided by

ಇನ್ನೊಂದೆಡೆಯಲ್ಲಿ ಬೂತಾರಾಧನೆಗೆ ಅವಮಾನ ಮಾಡಲಾಗಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿದೆ.  ಮತ್ತೊಂದೆಡೆಯಲ್ಲಿ ಸಿನಿಮಾ ಒಂದು ದೊಡ್ಡ ಮಾಧ್ಯಮವಾಗಿದ್ದು, ಈ ಮಾಧ್ಯಮದ ಮೂಲಕ ಬೂತಾರಾಧನೆಯನ್ನು ದೊಡ್ಡ ಜನ ಸಮೂಹಕ್ಕೆ ರಿಷಬ್ ಶೆಟ್ಟಿ ಪರಿಚಯಿಸಿದ್ದಾರೆ. ಇದಕ್ಕೆ ಅವರ ಬೆನ್ನು ತಟ್ಟಬೇಕಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.

ಇನ್ನೂ ಇತ್ತೀಚೆಗೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದಲ್ಲಿ ದೈವದ ವೇಷವನ್ನು ಕೇವಲ ಕಮರ್ಷಿಯಲ್ ಆಗಿ ಬಳಸಲಾಗಿತ್ತು. ಬೂತಾರಾಧನೆಯನ್ನು ಮಾಡುತ್ತಿದ್ದ ಕೆಳ ಜಾತಿಯ ಕುಟುಂಬದ ಮೇಲಾದ ಜಾತಿ ತಾರತಮ್ಯಗಳ ಕ್ರೂರತೆಯನ್ನು ಪರದೆಯಲ್ಲಿ ತೋರಿಸುವಲ್ಲಿ ಅದಕ್ಕೊಂದು ಸ್ಪಷ್ಟ ರೂಪ ನೀಡುವಲ್ಲಿ ನಿರ್ದೇಶಕ ಅನೂಪ್ ಭಂಡಾರಿ ವಿಫಲರಾಗಿದ್ದರು. ಜೊತೆಗೆ ಮೃಧು ಸ್ವಭಾವದ ಜನರು ಸೈಕೋ ಕಿಲ್ಲರ್ ಗಳಾಗುವಂತಹ ‘ನಾನ್ ಸೆನ್ಸ್’ ಅನ್ನ ಬಹುದಾದ ಕ್ಲೈಮ್ಯಾಕ್ಸ್ ನೀಡಿದ್ದರು. ವಿಕ್ರಾಂತ್ ರೋಣ-2 ಚಿತ್ರವನ್ನು ನಿರ್ಮಾಣ ಮಾಡುವುದೇ ಆದರೆ ಮುಂದಿನ ಚಿತ್ರದಲ್ಲಿ ಇಂತಹ ಸೂಕ್ಷ್ಮತೆಗಳನ್ನು ಗಮನಿಸಲಿ ಎನ್ನುವ ಅಭಿಪ್ರಾಯಗಳು ಕೂಡ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ