ಜನವರಿ 14, 15ರಂದು ಕ್ಯಾನ್ಸರ್ ಪೀಡಿತರಿಗೆ ಸಹಾಯಾರ್ಥ " ಜೈ ಭೀಮ್ ಟ್ರೋಫಿ 2023 "  - Mahanayaka
1:21 PM Thursday 12 - December 2024

ಜನವರಿ 14, 15ರಂದು ಕ್ಯಾನ್ಸರ್ ಪೀಡಿತರಿಗೆ ಸಹಾಯಾರ್ಥ ” ಜೈ ಭೀಮ್ ಟ್ರೋಫಿ 2023 ” 

dalith seva samiti
07/10/2022

ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ) ವಿಟ್ಲ ಇದರ ಆಶ್ರಯದಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾದ ನಾಲ್ವರಿಗೆ ಧನ ಸಹಾಯ ನೀಡುವ ಸಹಾಯಾರ್ಥ ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ(SC, ST)ದವರಿಗಾಗಿ ಆಹ್ವಾನಿತ 32 ತಂಡಗಳ  ಪುರುಷರ 11 ಜನರ ಫುಲ್ ಗ್ರೌಂಡ್ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ  ” ಜೈ ಭೀಮ್ ಟ್ರೋಫಿ 2023 ”  ಆಯೋಜಿಸಲಾಗಿದೆ.

2023ರ ಜನವರಿ 14 ಮತ್ತು 15ರಂದು ಈ ಪಂದ್ಯಾಟಗಳು ಬಹಳ ಶಿಸ್ತು ಬದ್ಧವಾಗಿ ನಡೆಯಲಿದ್ದು, ವಿಟ್ಲ ಸರಕಾರಿ ಮಾದರಿ ಶಾಲಾ ವಿಶ್ವ ಮಾನವ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದ್ದು, ಎರಡು ಕ್ರೀಡಾಂಗಣದಲ್ಲಿ ಏಕ ಕಾಲದಲ್ಲಿ ಪಂದ್ಯಾಟಗಳು ನಡೆಯಲಿವೆ.

ಪ್ರಶಸ್ತಿ ವಿವರ:

ಪ್ರಥಮ : ₹ 22000/- ಮತ್ತು ಆಕರ್ಷಕ ಜೈ ಭೀಮ್ ಟ್ರೋಫಿ

ದ್ವಿತೀಯ : ₹ 12000/- ಮತ್ತು ಆಕರ್ಷಕ ಜೈ ಭೀಮ್ ಟ್ರೊಫಿ

ತೃತೀಯ : ಆಕರ್ಷಕ ಜೈ ಭೀಮ್ ಟ್ರೊಫಿ

ಚತುರ್ಥ: ಆಕರ್ಷಕ ಜೈ ಭೀಮ್ ಟ್ರೊಫಿ

ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಆಲ್ ರೌಂಡರ್ ಪ್ರಶಸ್ತಿ.

ಪ್ರವೇಶ ಶುಲ್ಕ : ₹ 4000/-

ನಿಯಮಗಳು:

*4 ಓವರ್ ಗಳ ಪಂದ್ಯಾಟ. 1 ಆಫ್, 3 ಲೆಗ್ ಸ್ಪಿನ್ ಕಡ್ಡಾಯ.

*ಸ್ಪೋರ್ಟ್ಸ್ ಜೆರ್ಸಿ ಕಡ್ಡಾಯ.  ಶೂಸ್ ಕಡ್ಡಾಯ ಅಲ್ಲದಿದ್ದರೂ ಚಪ್ಪಲಿ ಧರಿಸಿ ಆಡುವಂತಿಲ್ಲ. ಜೀನ್ಸ್ ಧರಿಸುವಂತಿಲ್ಲ.

*ತ್ರೋ ಬಾಲ್, ಆಕ್ಷನ್ ಬಾಲ್ ನೋಬಾಲ್ ತೀರ್ಪು.

*ನಿಯಮ ಉಲ್ಲಂಘನೆಗೆ ರನ್ ಕಡಿತ, ಓವರ್ ಕಡಿತ.

*ಅಂಪೈರ್ ತೀರ್ಮಾನ ಅಂತಿಮ. ಸಂಘಟಕರ ತೀರ್ಮಾನ ಅಂತಿಮ.

ಚರ್ಚೆಗೆ ಅವಕಾಶ ಇಲ್ಲ.

*ಅಶಿಸ್ತು ವರ್ತನೆ ತಂಡ ಪಂದ್ಯಾಟದಿಂದ ಹೊರಗೆ. ಹಣ ಮರುಪಾವತಿ ಇಲ್ಲ.

*ಚರ್ಚೆ ಬಂದಲ್ಲಿ ನಾಯಕನಿಗೆ ಮಾತ್ರ ಸಂಘಟಕರ / ಅಂಪೈರ್ ಜೊತೆ ಮಾತನಾಡಲು ಅವಕಾಶ.

*ಆಟಗಾರರ ಫೋಟೋ ಮತ್ತು ಜಾತಿ ಸೂಚಕ ದಾಖಲೆ ಮೊದಲೇ ನೀಡುವುದು ಕಡ್ಡಾಯ.

*11+1 ಅವಕಾಶ. ಆಟಗಾರರ ಬದಲಾವಣೆ ಇಲ್ಲ.

*ಟೈ ಆದಲ್ಲಿ ವಿಕೆಟ್ ಆಧಾರದಲ್ಲಿ ಜಯ ಘೋಷಣೆ.

(ಸೆಮಿ ಮತ್ತು ಫೈನಲ್ ಸೂಪರ್ ಓವರ್ ಪಂದ್ಯಾಟ)

*15 ದಿನಗಳ ಮುಂಚಿತ ಲಾಟ್ಸ್ ನೀಡಲಾಗುವುದು.

*8 ಗಂಟೆಗೆ ಪಂದ್ಯ ಆರಂಭ. ಸಹಿ ಸಂಗ್ರಹ ಇದೆ.

*ತಂಡ ನೋಂದಣಿ ಗೆ 31.10.2022 ಕೊನೆಯ ದಿನ.

*ಅಡ್ವಾನ್ಸ್ ₹ 2000/- ನೀಡಿ ನೋಂದಾಯಿಸುವುದು.

*ಗೂಗಲ್ ಪೆ : 9900497605 (ಸ್ಕ್ರೀನ್ ಶಾಟ್ ಕಡ್ಡಾಯ ವಾಟ್ಸಾಪ್ ಮಾಡುವುದು. )

ವಿ.ಸೂ ; ಸಂಘಟನೆಯ ಸದಸ್ಯರಿಗೆ ಮತ್ತು ಪದಾಧಿಕಾರಿಗಳಿಗೆ ಮೊದಲ ಆದ್ಯತೆ.

ದಿನಾಂಕ 16.10.2022 ರವಿವಾರ ಮುನ್ನ ತಂಡ ನೋಂದಣಿ ಮಾಡುವುದು. ನಂತರ ಯಾವುದೇ ಆದ್ಯತೆ ನೋಂದಣಿ ಗೆ ಅವಕಾಶ ಇರುವುದಿಲ್ಲ. ಮೊದಲು ನೋಂದಾಯಿಸಿದ ತಂಡಗಳನ್ನೆ ಪರಿಗಣಿಸಲಾಗುವುದು. ಮಾಹಿತಿಗಳಿಗಾಗಿ  9972785806, 9481772739 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿಸಂಸ್ಥಾಪಕ ಅಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ