ವೈದ್ಯರ ಬಳಿ ಚಿಕಿತ್ಸೆ ಪಡೆದು ಬಂದು ಮಲಗಿದ ವ್ಯಕ್ತಿ ಮತ್ತೆ ಏಳಲೇ ಇಲ್ಲ! - Mahanayaka
1:15 PM Thursday 12 - December 2024

ವೈದ್ಯರ ಬಳಿ ಚಿಕಿತ್ಸೆ ಪಡೆದು ಬಂದು ಮಲಗಿದ ವ್ಯಕ್ತಿ ಮತ್ತೆ ಏಳಲೇ ಇಲ್ಲ!

heart attack
07/10/2022

ಉಡುಪಿ: ಎದೆನೋವು ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಒರಿಸ್ಸಾ ಮಯೂರ ಬಾಂಜ್ ಜಿಲ್ಲೆಯ ನಿವಾಸಿ 46 ವರ್ಷದ ಕಾಮೊ ಮರಾಂಡಿ ಎಂದು ಗುರುತಿಸಲಾಗಿದೆ.

ಇವರು ನೀರ್‌ಜಡ್ಡು K.P.T.C.L ಪವರ್‌ ಸ್ಟೇಶನ್‌ ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸಮಾಡಿಕೊಂಡಿದ್ದು, ಹೆಗ್ಗುಂಜೆ ನಿವಾಸಿ ಪುರುಷೋತ್ತಮ ಎಂಬವರ ಮನೆಯ ಮೇಲ್ಬಾಗದಲ್ಲಿ ಬಾಡಿಗೆ ರೂಮ್‌ ನಲ್ಲಿ ವಾಸವಾಗಿದ್ದರು.

ಇವರಿಗೆ ಎದೆನೋವು ಕಾಣಿಸಿಕೊಂಡಿದ್ದು, ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ರೂಮ್ ನಲ್ಲಿ ಮಲಗಿದ್ದರು. ರೂಮ್ ನಲ್ಲಿ ವಾಸವಾಗಿರುವ ರಾಹುಲ್‌ ಕುಮಾರ್‌ ಎಂಬವರು ಕೆಲಸ ಮುಗಿಸಿಕೊಂಡು ಬಂದು ನೋಡುವಾಗ ಕಾಮೊ ಮರಾಂಡಿ ಯಾವುದೇ ಉಸಿರಾಟದ ಪ್ರಕ್ರಿಯೆ ಇಲ್ಲದೆ ಮಲಗಿದ್ದರು.

ಕೂಡಲೇ ಅವರನ್ನು ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಕಾಮೊ ಮರಾಂಡಿ ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ಧಾರೆ.. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ