4Gಯಿಂದ 5Gಗೆ ಚೇಂಜ್ ಮಾಡ್ತೇವೆ OTP ಕೊಡಿ ಅಂದ್ರೆ ಕೊಡಬೇಡಿ: ಸಾರ್ವಜನಿಕರೇ ಎಚ್ಚೆತ್ತುಕೊಳ್ಳಿ
ಅಂದ ಹಾಗೆ, ದೇಶದಲ್ಲಿ 5G ಸೇವೆ ಆರಂಭವಾಗಿದೆ. ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಳ್ಳಲು ಸೈಬರ್ ಕಳ್ಳರು ಮುಂದಾಗುವ ಸಾಧ್ಯತೆಗಳಿರುವುದರಿಂದ ಪೊಲೀಸರು ಎಚ್ಚೆತ್ತುಕೊಂಡಿದ್ದು, ಸಾರ್ವಜನಿಕರಿಗೆ ಎಚ್ಚರವಾಗಿರುವಂತೆ ಸೂಚನೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ಪ್ರಕಟಣೆಯಂತೆ, ದೇಶದಲ್ಲಿ 5G ಸೇವೆ ಆರಂಭವಾಗಿದ್ದು, ಇದನ್ನೇ ನೆಪವಾಗಿಟ್ಟುಕೊಂಡು ಸೈಬರ್ ಕ್ರೈಮ್ ನ ಕೆಲವು ಕಿಡಿಗೇಡಿಗಳು, ನಿಮ್ಮ ಮೊಬೈಲ್ ಗೆ ಕಾಲ್ ಮಾಡಿ ನಿಮ್ಮ ಸಿಮ್ ನ್ನು 4Gಯಿಂದ 5Gಗೆ ಬದಲಾಯಿಸುತ್ತೇವೆ. OTP ಬಂದ್ರೆ ನಮಗೆ ತಿಳಿಸಿ ಅಂತ ಪಡೆದುಕೊಳ್ಳಬಹುದು. ಬಳಿಕ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಅವರ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳಬಹುದು ಆದ್ದರಿಂದ ಸಾರ್ವಜನಿಕರು ಎಚ್ಚರವಾಗಿರಬೇಕು ಎಂದು ತಿಳಿಸಿದ್ದಾರೆ.
ಯಾರೇ ಆದ್ರೂ ಒಟಿಪಿ ಕೇಳಿದರೆ ಕೊಡಬೇಡಿ. ಸೈಬರ್ ಕ್ರೈಮ್ ನಿಂದ ಸುರಕ್ಷಿತವಾಗಿರಿ ಎಂದು ಪೊಲೀಸರು ಸಾರ್ವಜನಿಕರನ್ನು ಪ್ರಕಟಣೆ ಮೂಲಕ ಜಾಗೃತಿಗೊಳಿಸಿದ್ದಾರೆ.
ಸೈಬರ್ ಕ್ರೈಮ್ ಅನ್ನೋದು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಅಪರಾಧ ಚಟುವಟಿಕೆಯಾಗಿದೆ. ಮೋಡಿ ಮಾಡುವ ಮಾತುಗಳ ಮೂಲಕ ಸಾರ್ವಜನಿಕರನ್ನು ಅತೀ ಸುಲಭವಾಗಿ ವಂಚಿಸುವ ಜಾಲ ಇದಾಗಿದೆ. ಹೀಗಾಗಿ ಸಾರ್ವಜನಿಕರು ಈ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳುವ ಮೂಲಕ ಸೈಬರ್ ವಂಚಕರ ದುಷ್ಕೃತ್ಯವನ್ನು ವಿಫಲಗೊಳಿಸಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka