ಆನ್ ಲೈನ್ ಗೇಮ್ಸ್ ಬ್ಯಾನ್ ಗೆ ಚಿಂತನೆ: ತಮಿಳುನಾಡು ಸರ್ಕಾರದಿಂದ ಮಹತ್ವದ ಹೆಜ್ಜೆ - Mahanayaka
11:12 PM Wednesday 11 - December 2024

ಆನ್ ಲೈನ್ ಗೇಮ್ಸ್ ಬ್ಯಾನ್ ಗೆ ಚಿಂತನೆ: ತಮಿಳುನಾಡು ಸರ್ಕಾರದಿಂದ ಮಹತ್ವದ ಹೆಜ್ಜೆ

online game ban
08/10/2022

ಆನ್ ಲೈನ್ ಜೂಜಾಟದ ಗೇಮ್ ಗಳನ್ನು ನಿಷೇಧಿಸಲು ತಮಿಳುನಾಡು ಸರ್ಕಾರ ಚಿಂತನೆ ನಡೆಸಿದ್ದು, ರಾಜ್ಯದಲ್ಲಿ ಜೂಜಿನ ಆನ್ ಲೈನ್ ಗೇಮಿಂಗ್ ನಿಂದ ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಚಿಂತನೆ ನಡೆಸಿದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ ಈ ವರ್ಷವೊಂದರಲ್ಲೇ ಆನ್ ಲೈನ್ ಜೂಜು ಗೇಮಿಂಗ್ ನ ವಂಚನೆಯಿಂದ ಒಟ್ಟು ಆರು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಈ ಹಿನ್ನೆಲೆಯಲ್ಲಿ  ಆನ್ ಲೈನ್ ರಮ್ಮಿ ಹಾಗೂ ಪೋಕರ್ ಆಟಗಳನ್ನು 2 ವಾರಗಳ ಕಾಲ ನಿಷೇಧಿಸಿ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿತ್ತು. ಸರ್ಕಾರದ ನಿರ್ಧಾರಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರು. ಇದರ ಬೆನ್ನಲ್ಲೇ ಈ ಆಟಗಳನ್ನು ಶಾಶ್ವತವಾಗಿ  ನಿಷೇಧ ಮಾಡಲು ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ.

ಆನ್ ಲೈನ್ ಆಟಗಳು ಮಾತ್ರವಲ್ಲದೇ ಜೂಜು ಆಧಾರಿತ ಜಾಹೀರಾತುಗಳನ್ನು ಕೂಡ ನಿಷೇಧಿಸಲು ತಮಿಳುನಾಡು ಸರ್ಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಹೊಸ ಕಾನೂನು ಜಾರಿಗೆ ಮುಂದಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ