ನಾನು ನಿಷ್ಠಾವಂತ ಭಕ್ತ ಜೈ ಶ್ರೀರಾಮ್, ಜೈ ಕೃಷ್ಣ: ಕೇಜ್ರಿವಾಲ್

ಗಾಂಧಿನಗರ: ಬಿಜೆಪಿಯವರು ದೇವರನ್ನು ಅವಮಾನಿಸುತ್ತಿದ್ದಾರೆ. ನಾನು ನಿಷ್ಠಾವಂತ ಭಕ್ತ, ಜೈ ಶ್ರೀರಾಮ್, ಜೈ ಕೃಷ್ಣ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಗುಜರಾತ್ ನ ವಡೋದರದಲ್ಲಿ ಮಾತನಾಡಿದ ಅವರು, ಪೌರಾಣಿಕಗಳನ್ನು ಸರಿಯಾಗಿ ತಿಳಿದುಕೊಂಡರೆ, ಬಿಜೆಪಿ ದೇವರಿಗೆ ಅವಮಾನಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದರು.
ನಮ್ಮ ಪಕ್ಷದ ಹಾಗೂ ಮುಖಂಡರ ವಿರುದ್ಧ ಬಿಜೆಪಿಯವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ನಾನು ಹೆದರುವುದಿಲ್ಲ. ನನ್ನನ್ನು ದ್ವೇಷ ಭಾವನೆಯಿಂದ ನೋಡುತ್ತಿದ್ದಾರೆ. ದ್ವೇಷದಲ್ಲಿ ಅವರು ಕುರುಡಾಗಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.
ನಾನು ಮಾತ್ರ ನಿಷ್ಠಾವಂತ ಭಕ್ತ ಜೈ ಶ್ರೀರಾಮ್, ಜೈ ಶ್ರೀಕೃಷ್ಣ ಎಂದು ಕೇಜ್ರಿವಾಲ್ ಘೋಷಣೆ ಕೂಗಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka