ತಾವೇ ಹೊಡೆದುಕೊಂಡು ಅನ್ಯಕೋಮಿನವರು ಹೊಡೆದರೆಂದು ದೂರು: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ
ಕಾರವಾರ: ಕೋಮು ಸಂಘರ್ಷ ಹುಟ್ಟಿಸಿ ಶಾಂತಿ ಕದಡಲು ಯತ್ನಿಸಿದ ಇಬ್ಬರು ಹಿಂದೂ ಕಾರ್ಯಕರ್ತರನ್ನು ಮುರುಡೇಶ್ವರ ಠಾಣೆ ಹಾಗೂ ಭಟ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿರಾಲಿಯ ನವೀನ್ ಸೋಮಯ್ಯ ನಾಯ್ಕ ಹಾಗೂ ನವೀನ್ ವೆಂಕಟೇಶ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ. ನವೀನ್ ಸೋಮಯ್ಯ ನಾಯ್ಕನಿಗೆ, ನವೀನ್ ವೆಂಕಟೇಶ ನಾಯ್ಕೆ ಕೀ ಚೈನ್ ನಿಂದ ತಲೆಗೆ ಹಲ್ಲೆ ನಡೆಸಿದ್ದು ಬಳಿಕ ಅನ್ಯಕೋಮಿನವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನವೀನ್ ಸೋಮಯ್ಯ ಮುರುಡೇಶ್ವರ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾರೆ.
ಭಟ್ಕಳದಲ್ಲಿ ಕೋಮುಸೌಹಾರ್ದತೆ ಕದಡಲು ಮತ್ತು ಶಾಂತಿ ಭಂಗ ಮಾಡುವ ಉದ್ದೇಶದಿಂದ ಈ ಇಬ್ಬರು ಕೃತ್ಯ ನಡೆಸಿದ್ದಾರೆ. ಆದರೆ ಪ್ರಕರಣವನ್ನು ತಕ್ಷಣವೇ ತನಿಖೆ ನಡೆಸಿ ಕಿಡಿಗೇಡಿಗಳ ದುಷ್ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka