ರಾಜಕೀಯವಾಗಿ ಎದುರಿಸಲು ಧಮ್ ಇಲ್ಲವಾ..?: ಕಮಿಷನರ್, ಬಿಜೆಪಿ ವಿರುದ್ಧ ಎಸ್ ಡಿಪಿಐ ಕಿಡಿ
ಮಂಗಳೂರು: ಎಡಿಜಿಪಿ ಅಲೋಕ್ ಕುಮಾರ್ ಅವರು ಎಸ್ ಡಿಪಿಐ ಕಚೇರಿಗೆ ದಾಳಿ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದರೂ ಜಿಲ್ಲೆಯಲ್ಲಿ ಪೊಲೀಸ್ ಕಮಿಷನರ್ ಮುಂದಿಟ್ಟುಕೊಂಡು ನಿರಂತರ ದಾಳಿ ಆಗುತ್ತಿದೆ. ಇವರಿಗೆ ನಿರ್ದೇಶನ ನೀಡಿದವರು ಯಾರು..? ಇಡೀ ದೇಶದಲ್ಲಿ ದ.ಕ ಜಿಲ್ಲೆಯಲ್ಲಿ ಮಾತ್ರ ಇಂತಹ ದಾಳಿಗಳು ಯಾಕೆ ಆಗುತ್ತಿದೆ. ಹಾಗಾದರೆ ಕಮಿಷನರ್ ಕೇವಲ ಇದನ್ನು ಫೇಮಸ್ ಆಗೋಕೆ ಮಾಡ್ತಿದ್ದಾರಾ? ರಾಜಕೀಯ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹೀಗೆ ಮಾಡ್ತಿದ್ದಾರಾ? ಕೂತರೂ ನಿಂತರೂ ಪ್ರೆಸ್ ಮೀಟ್ ಮಾಡುವ ಕಮಿಷನರ್ ಇದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ರಾಜ್ಯ ಸಮಿತಿ ಮಾಧ್ಯಮ ಸಂಯೋಜಕ ರಿಯಾಝ್ ಕಡಂಬು ಪ್ರಶ್ನಿಸಿದ್ದಾರೆ.
ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ‘ಕಚೇರಿಗೆ ಬೀಗ ಹಾಕುವುದು , ರಾತ್ರಿ ವೇಳೆ ದಾಳಿ ಏಕೆ..? ಎಂದು ಪ್ರಶ್ನಿಸಿದ ಅವರು, ಅಮಾಯಕರನ್ನು ಬಂಧಿಸಲಾಗುತ್ತಿದೆ. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಉಳಿದವರಲ್ಲಿ ನಾವು ಕೇಳುವ ಪ್ರಶ್ನೆ ಏನೆಂದರೆ ಎಸ್ ಡಿಪಿಐನ್ನು ರಾಜಕೀಯವಾಗಿ ಎದುರಿಸಲು ಧಮ್ ಇಲ್ಲವಾ..? ಎಂದು ಅವರು ಪ್ರಶ್ನಿಸಿದರು.
ನಮ್ಮದು ರಾಜಕೀಯ ಪಕ್ಷ. ನಮ್ಮ ಸಂಘಟನೆಯ ಸದುದ್ದೇಶ ಜನರಿಗೆ ತಿಳಿದಿರುವುದರಿಂದ ದಲಿತರು, ಕ್ರೈಸ್ತರು ಎಲ್ಲರೂ ನಮ್ಮ ಸಂಘಟನೆಗೆ ಸೇರುತ್ತಿದ್ದಾರೆ. ಇದನ್ನು ನೋಡಿ ಸಹಿಸಲಾಗದ ಬಿಜೆಪಿ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣಾ ಆಯೋಗವೇ ನಮ್ಮ ಎಸ್‌ಡಿಪಿಐ ಸಂಘಟನೆ ಸಂವಿಧಾನ ತತ್ವಗಳ ಮೂಲಕ ಕೆಲಸ ಮಾಡುತ್ತಿದೆ ಎಂದು ಕ್ಲೀನ್‌ಚಿಟ್ ಕೊಟ್ಟಿರುವಾಗ ದ.ಕ. ಜಿಲ್ಲೆಯಲ್ಲಿ ಮಾತ್ರ ಯಾಕೆ ಇಂತಹ ಪ್ರಕ್ರಿಯೆಗಳು ನಡೆಯುತ್ತಿದೆ’ ಎಂದು ಹೇಳಿದರು.
ಇನ್ನು ಎಸ್ ಡಿಪಿಐನ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ, ‘ಬಿಜೆಪಿ ಸರಕಾರ ಸಂಪೂರ್ಣವಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಎನ್ ಐಎಯನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದರು. ನಾವು ರಾಜಕೀಯವಾಗಿ ಗುರುತಿಸಿಕೊಂಡಿರುವ ಅಧಿಕೃತವಾಗಿರುವ ಒಂದು ರಾಜಕೀಯ ಪಕ್ಷ. ಆದರೆ ನಮ್ಮ ನಾಯಕರ ಮೇಲೆ ಕಟ್ಟು ಕಥೆ ಕಟ್ಟಿ ಬಂಧಿಸಲಾಗಿದೆ’ ಎಂದು ದೂರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, ಇವತ್ತು ಪೊಲೀಸ್ ಇಲಾಖೆ ನಾನು ಅತ್ತಂತೆ ಮಾಡುತ್ತೇನೆ. ನೀನು ನಕ್ಕ ಹಾಗೆ ಮಾಡು’ ಎಂಬಂತೆ ನಾಟಕ ಮಾಡುತ್ತಿದೆ. ಎಸ್ ಡಿಪಿಐ ಕಚೇರಿ ಮೇಲೆ ದಾಳಿ ಆದಾಗ ನಾವು ಕೂಡಾ ಟ್ವೀಟ್ ಮಾಡಿದ್ದೇವೆ, ಅವರನ್ನು ಸಂಪರ್ಕಿಸಿದ್ದೇವೆ ಆದರೆ ಪ್ರಯೋಜನವಾಗಲಿಲ್ಲ. ನಾವು ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡ್ತಿದ್ದೇವೆ, ಆಫೀಸ್ ಮುಚ್ಚಿ ಎಲ್ಲಾ ಕೆಲಸ ಬಾಕಿ ಉಳಿದಿದೆ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫಾನ್ಸ್ ಫ್ರಾಂಕೋ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಮೊದಲಾದವರಿದ್ದರು.
Video:
Video:
Video:
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka