ಕನಸಿನ ಮನೆಯಿಂದ ಮರಳಿ ಮನೆ ಸೇರಿದ ವೃದ್ಧೆ
ಕಾಪು: ಉದ್ಯಾವರದ ಕನಸಿನ ಮನೆಯಲ್ಲಿ ಶುಶ್ರೂಷೆಗಾಗಿ ಆಶ್ರಯ ಪಡೆದಿದ್ದ, ವೃದ್ಧೆಯನ್ನು ಮರಳಿ ವಾಸವಾಗಿದ್ದ ಬಾಡಿಗೆ ಮನೆಗೆ ಸಾಮಾಜಿಕ ಕಾರ್ಯಕರ್ತರು ಸೇರಿಸಿದರು.
ವೃದ್ಧೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾಗಿದ್ದರೂ ಕಳೆದ ಮೂರು ತಿಂಗಳಿಂದ ಅಸಹಾಯಕರಾಗಿ ಜಿಲ್ಲಾಸ್ಪತ್ರೆಯಲ್ಲಿ ದಿನಗಳ ಕಳೆಯುತ್ತಿದ್ದರು. ಆ ಬಳಿಕ ಹೈಕೋರ್ಟ್ ನ್ಯಾಯಾಧೀಶರ ಆದೇಶದ ಮೇರೆಗೆ ಹಿರಿಯ ನಾಗರಿಕ ಕನಸಿನ ಮನೆಗೆ ದಾಖಲುಪಡಿಸಿಲಾಗಿತ್ತು.
ವೃದ್ಧೆಯನ್ನು ಲೀಲಾ ಪೂಜಾರ್ತಿ 78 ಕಾಪು, ಕೊಂಬಗುಡ್ಡೆ ಮಲ್ಲಾರು ಗ್ರಾಮ ನಿವಾಸಿ, ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಮನೆ ಹತ್ತಿರದ ಪ್ರೇಮಾ ಶೆಟ್ಟಿಯವರು ಈ ಮೊದಲು ವೃದ್ಧೆಗೆ ಊಟ ತಿಂಡಿ ಕೊಡುತ್ತಿದ್ದರೆಂದು ತಿಳಿದುಬಂದಿದೆ.
ವೃದ್ಧೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತರುವಾಗಿರುವ ನಿತ್ಯಾನಂದ ಒಳಕಾಡು, ಹಿರಿಯ ನಾಗರಿಕರ ಕನಸಿನ ಮನೆಯ ಸೀಮಾ ದೇವಾಡಿಗ ,ಕವಿತಾ ಭಾಗಿಯಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka