ದುರ್ಗಾದೌಡ್’ನಲ್ಲಿ ಮಾರಕಾಸ್ತ್ರ ಪ್ರದರ್ಶನ: ಪೊಲೀಸರ ಕ್ರಮಕ್ಕೆ ಅಮೃತ್ ಶೆಣೈ ಅಭಿನಂದನೆ
ಉಡುಪಿ: ಇತ್ತೀಚೆಗೆ ಉಡುಪಿಯಲ್ಲಿ ದುರ್ಗಾದೌಡ್ ಎಂಬ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಮಾರಕಾಸ್ತ್ರ ಪ್ರದರ್ಶನ ಮಾಡಿ ಮೆರವಣಿಗೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಿದ ಉಡುಪಿ ಪೊಲೀಸರಿಗೆ ಉಡುಪಿ ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಅಭಿನಂದನೆ ಸಲ್ಲಿಸಿದ್ದಾರೆ.
ಈ ಮೆರವಣಿಗೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್, ಸಚಿವ ಸುನೀಲ್ ಕುಮಾರ್ ಹಾಗೂ ಅನೇಕ ಬಿಜೆಪಿ ನಾಯಕರು ಭಾಗಿ ಆಗಿದ್ದರು. ಕಾನೂನು ಬಾಹಿರ ಕೃತ್ಯದಲ್ಲಿ ಇವರೂ ಭಾಗಿ ಆಗಿದ್ದರು,ಈ ನಾಯಕರ ಆಪ್ತರು,ಕುಟುಂಬ ಸದಸ್ಯರ ಕೈಯಲ್ಲಿ ಇವರು ಯಾವತ್ತೂ ಧರ್ಮ ರಕ್ಷಣೆಗಾಗಿ ಆಯುಧ ನೀಡುವುದಿಲ್ಲ, ಸಾಮಾನ್ಯ ಹಿನ್ನೆಲೆಯ ಯುವ ಜನತೆ ಆಯುಧ ಹಿಡಿಯಬೇಕು, ಇವರೆಲ್ಲಾ ಶಾಸಕ ಸಂಸದರಾಗಬೇಕು ಎಂದು ಅವರು ಹೇಳಿದರು.
ಇವತ್ತು ಹಿಂದುತ್ವ ಎಂದು ಕಾನೂನು ಕೈಗೆ ತಗೊಳ್ಳುವ ಯುವಕರೂ ಮುಂದೆ ಬಿಜೆಪಿಗೆ ಟೀಕೆ ಮಾಡುವ ದಿನಗಳು ಬರುತ್ತವೆ, ನಾಯಕರ ಮಕ್ಕಳು ಶಾಲಾ ಕಾಲೇಜಿಗೆ ಹೋಗುತ್ತಾರೆ ವಿನಹ ಇಂತಹ ಚಟುವಟಿಕೆಗಳನ್ನು ಮಾಡುವುದಿಲ್ಲ ಎಂದು ಅವರು ಹೇಳಿದರು.
ದೇಶದ ಹಲವು ಕಡೆ ಇಂದು ಪೊಲೀಸರೇ ಕಾನೂನನ್ನು ಕೈಗೆತ್ತಿ ಎಕ್ಸಟ್ರಾ ಜುಡಿಶಿಯರಿ ತರಹ ಕೆಲಸ ಮಾಡುವುದನ್ನು ನಾವೆಲ್ಲಾ ಕಾಣುವ ಸಂದರ್ಭದಲ್ಲಿ ಉಡುಪಿ ಪೊಲೀಸ್ ಇಲಾಖೆ ಆಡಳಿತ ಪಕ್ಷದ ಬೆಂಬಲ ಇದ್ದ ಕಾರ್ಯಕ್ರಮ ಎಂದು ಲೆಕ್ಕಿಸದೇ ತಲವಾರು ಪ್ರದರ್ಶಿಸಿದವರ ವಿರುದ್ಧ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಿದ್ದು ಅಭಿನಂದನೀಯ ಎಂದು ಉಡುಪಿ ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಪ್ರಶಂಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka