ಬೈಕ್ ಗಳ ಮುಖಾಮುಖಿ ಡಿಕ್ಕಿ: ಅಣ್ಣ—ತಂಗಿ ಸಹಿತ ಮೂವರಿಗೆ ಗಂಭೀರ ಗಾಯ
ಬೆಳ್ತಂಗಡಿ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ನಡೆದಿದ್ದು , ಅಣ್ಣ ತಂಗಿ ಸೇರಿ ಮೂವರು ಗಂಭೀರ ಗಾಯಗೊಂಡ ಘಟನೆ ಬೆಳಾಲಿನ ನೆಕ್ಕಲದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನೆಕ್ಕಿಲ ಎಂಬಲ್ಲಿ ಎರಡು ಬೈಕ್ ನಡುವೆ ಅಪಘಾತ ನಡೆದು ಒಂದು ಬೈಕ್ ನಲ್ಲಿದ್ದ ಕೊಯ್ಯೂರು ಗ್ರಾಮದ ಜೆಂಕಿನಡ್ಕ ನಿವಾಸಿ ಉಮೇಶ್ ಗೌಡರ ಮಗ ಕಾರ್ತಿಕ್ ಮತ್ತು ಮಗಳು ಕೃಪಾಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡಿದ್ದಾರೆ ಮತ್ತೊಂದು ಬೈಕ್ ಸಾವರ ಡೆಲಿವರಿ ಬಾಯ್ ಫೈರೋಜ್ ಕೂಡ ಕಾಲಿಗೆ ಗಂಭೀರ ಗಾಯಗೊಂಡಿದ್ದು ಮೂವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಮೇಶ್ ಗೌಡರ ಮಕ್ಕಳಾದ ಕಾರ್ತಿಕ್ ಮತ್ತು ಕೃಪಾ ಮನೆಯಿಂದ ಬೈಕ್ ನಲ್ಲಿ ಬೆಳಾಲು ದೇವಸ್ಥಾನಕ್ಕೆ ಹೋಗುತ್ತಿದ್ದರು , ಬೆಳಾಲಿನಿಂದ ಬೆಳ್ತಂಗಡಿ ಕಡೆಗೆ ಡೆಲಿವರಿ ಬಾಯ್ ಫೈರೋಜ್ ಬರುತ್ತಿದ್ದಾಗ ಅಪಘಾತ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka