ಸಾರ್ವಜನಿಕ ಸ್ಥಳದಲ್ಲಿ ಜುಗಾರಿ: 9 ಮಂದಿ ಅರೆಸ್ಟ್, ಹಣ, ವಾಹನ ವಶಕ್ಕೆ
ಬೆಳ್ತಂಗಡಿ: ಶಿಶಿಲ ಗ್ರಾಮದ ಅಂಚಿನಡ್ಕ ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಿ, ಅಡ್ಡೆಗೆ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸರು ದಾಳಿ ಮಾಡಿದ್ದು, ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ ಹಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ
ಬಂಧಿತ ಆರೋಪಿಗಳು ಶಿಶಿಲ ಗ್ರಾಮದ ಓಟ್ಲ ನಿವಾಸಿ ವೆಂಕಪ್ಪ (55), ಪರಾರಿ ಬಾಳ ಹಿತ್ತಿಲು ವಸಂತ ಗೌಡ (48), ನಾಗನಡ್ಕ ಮನೆ ಕೃಷ್ಣಪ್ಪ ಗೌಡ (45), ಐಂಗುಡ ಮನೆ ಶಿವರಾಮ ಗೌಡ (53), ಅಂಬೆತ್ತಡ್ಕ ಸದಾಶಿವ (38), ಮುಳಿಮಜಲು ಪೊಡಿಯಾ (50), ಅಂಬೆತ್ತಡ್ಕ ಹೊನ್ನಪ್ಪ ಗೌಡ (47), ಮಚ್ಚಿರಡ್ಕ ಸುರೇಶ (33), ಮುಳಿಮಜಲು ಕೇಶವ (42) ಎಂಬವರಗಿದ್ದಾರೆ.
ಶಿಶಿಲ ಗ್ರಾಮದ ಅಂಚಿನಡ್ಕ ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಣವಾಗಿಟ್ಟು, 9 ಮಂದಿ ಜುಗಾರಿ ಆಟ ಆಡುತ್ತಿದ್ದರು. ಸ್ಥಳದಿಂದ ಪಣವಾಗಿಟ್ಟ ನಗದು 11,370 ರೂ. ಹಾಗೂ ದ್ವಿಚಕ್ರ ವಾಹನ, ಮಾರುತಿ ಓಮಿನಿ ನಗದು ಹಾಗೂ ಸೊತ್ತುಗಳು ಸೇರಿ ಅಂದಾಜು 1,01,370 ರೂ. ಸೊತ್ತು ವಶಕ್ಕೆಪಡೆಯಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka