ಪ್ಲಾಸ್ಮಾ ಬದಲಿಗೆ ಡ್ರಿಪ್ಸ್ ನಲ್ಲಿ ಮೂಸಂಬಿ ರಸ: ಡೆಂಗ್ಯೂ ರೋಗಿಯ ದುರಂತ ಸಾವು!
ಪ್ರಯಾಗ್’ರಾಜ್: ಡ್ರಿಪ್ಸ್ ನಲ್ಲಿ ಪ್ಲಾಸ್ಮಾ ಬದಲಿಗೆ ಮೂಸಂಬಿ ರಸ ನೀಡಿದ ಪರಿಣಾಮ ಡೆಂಗ್ಯೂ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಉತ್ತರಪ್ರದೇಶದ ಆಸ್ಪತ್ರೆಗಳ ಕಳಪೆ ಪ್ರದರ್ಶನಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್ ನ ಜಾಲ್ವಾ ಎಂಬಲ್ಲಿ ಈ ಘಟನೆ ನಡೆದಿದ್ದು, ಡೆಂಗಿ ರೋಗಿಯೊಬ್ಬರ ದೇಹಕ್ಕೆ ಪ್ಲಾಸ್ಮಾ ನೀಡುವುದಕ್ಕೆ ಬದಲಾಗಿ ಮೂಸಂಬಿ ರಸ ನೀಡಲಾಗಿದ್ದು, ತಪ್ಪಾದ ಚಿಕಿತ್ಸೆಯಿಂದಾಗಿ ರೋಗಿ ಸಾವನ್ನಪ್ಪಿದ್ದಾರೆ.
ಪ್ರದೀಪ್ ಪಾಂಡೆ ಎಂಬವರು ಮೃತಪಟ್ಟ ರೋಗಿಯಾಗಿದ್ದು, ಈ ಪ್ರಕರಣದಿಂದ ಉತ್ತರ ಪ್ರದೇಶದಲ್ಲಿ ನಕಲಿ ರಕ್ತನಿಧಿಗಳ ಬೃಹತ್ ಅಕ್ರಮಗಳು ಬಯಲಾಗಿದೆ.
ಪ್ಲಾಸ್ಮಾ ಪೊಟ್ಟಣದಲ್ಲಿ ಮೂಸಂಬಿ ರಸ ಇರುವುದನ್ನು ಪತ್ರಕರ್ತರೊಬ್ಬರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ ಎಂದು ಗುರುವಾರ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಇಡೀ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದ್ದು, ಅಲ್ಲಿನ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka