ಒಬ್ಬ ಬ್ರಾಹ್ಮಣನಾಗಿ ಅವನು ಹೇಗೆ ಬರೆದಿದ್ದಾನೆ ನೋಡಿ: ಅಸಭ್ಯ ಟ್ರೋಲ್ ವಿರುದ್ಧ ಪ್ರತಿಭಾ ಕುಳಾಯಿ ಕಿಡಿ
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಟ್ರೋಲ್ ಮಾಡಿದವರಿಗೆ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯವನು ಅಂತ ಹೇಳಿ ನಾನು ಟೋಲ್ ವಿರೋಧಿ ಪ್ರತಿಭಟನೆಯಲ್ಲಿ ಅಡ್ಡವಾಗಿ ಮಲಗಿದ ಫೋಟೋ ಬಳಸಿ ಅಶ್ಲೀಲವಾಗಿ ಟ್ರೋಲ್ ಮಾಡಿದ್ದಾರೆ. ಕೇವಲ, ಕೀಳಾಗಿ ಬರೆದಿದ್ದಾರೆ. ಬ್ರಾಹ್ಮಣ ಆಗಿ ಈ ರೀತಿಯ ಮಾನಗೆಟ್ಟ ರೀತಿಯಲ್ಲಿ ಬರೆದವನಿಗೆ ನಾನು ಹೆಣ್ಮಗಳಾಗಿ ಓದಲು ನಾಚಿಕೆ ಇಲ್ಲ. ಇಂತಹವನಿಗೆ ನಾನು ಹೇಗೆ ಪಾಠ ಕಲಿಸ್ತೀನಿ ಅನ್ನುವುದು ಸ್ಪಲ್ಪ ಹೊತ್ತಿನಲ್ಲಿ ಗೊತ್ತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂತಹವರ ಸ್ಕ್ರೀನ್ ಶಾಟ್’ನ್ನು ತೆಗೆದಿಟ್ಟಿದ್ದು ಕೇಸ್ ಕೂಡಾ ದಾಖಲಿಸ್ತೀನಿ. ಇಂತಹವರಿಗೆ ಹೆಣ್ಣು ಯಾವ ರೀತಿ ಉತ್ತರ ಕೊಡುತ್ತಾಳೆ ಎನ್ನುವುದನ್ನು ಜಿಲ್ಲೆಯ ಜನ್ರಿಗೆ ತೋರಿಸ್ತೀನಿ ಅಂದ್ರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka