ಬೆಡ್ ಶೀಟ್ ಮಾರಾಟ ಮಾಡಲು ಹೋದವರ ಮೇಲೆ ಮಾರಣಾಂತಿಕ ಹಲ್ಲೆ - Mahanayaka
2:12 AM Wednesday 11 - December 2024

ಬೆಡ್ ಶೀಟ್ ಮಾರಾಟ ಮಾಡಲು ಹೋದವರ ಮೇಲೆ ಮಾರಣಾಂತಿಕ ಹಲ್ಲೆ

bellare
21/10/2022

ಕಡಬ: ಬೆಡ್ ಶೀಟ್ ಮಾರಾಟಕ್ಕೆಂದು ತೆರಳಿದ್ದ ಯುವಕರ ಮೇಲೆ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಾಣಿಯೂರು ಗ್ರಾಮದ ಬೆದ್ರಾಜೆಯಲ್ಲಿ ನಡೆದಿದೆ.

ಮಂಗಳೂರು ತಾಲೂಕಿನ ಅಡ್ಡೂರು ನಿವಾಸಿ ರಮೀಜುದ್ದೀನ್ ಹಾಗೂ ಅವರ ಸಂಬಂಧಿ ಮಹಮ್ಮದ್ ರಫೀಕ್ ಎಂಬವರು ಹಲ್ಲೆಗೊಳಗಾದವರು ಎಂದು ತಿಳಿದು ತಿಳಿದು ಬಂದಿದೆ.

ಅಕ್ಟೋಬರ್ 20ರಂದು ಕಡಬ ತಾಲೂಕಿನ ಎಡಮಂಗಲ ಹಾಗೂ ದೋಲ್ಪಾಡಿ ಪ್ರದೇಶದಲ್ಲಿ ಬೆಡ್ ಶೀಟ್ ಮಾರಾಟಕ್ಕೆಂದು ತೆರಳಿದ್ದರು. ಬೆಡ್ ಶೀಟ್ ಮಾರಾಟ ಮಾಡುತ್ತಿದ್ದಾಗ ಮನೆಯೊಂದರಲ್ಲಿ ಮಹಿಳೆಯರ ಜೊತೆಗೆ ತಕರಾರು ಉಂಟಾಗಿತ್ತು ಎನ್ನಲಾಗಿದೆ.

ಬಳಿಕ ಮಾರಾಟಗಾರರಿಬ್ಬರು ಕಾಣಿಯೂರು ಕಡೆಗೆ ಬರುತ್ತಿದ್ದರು ಈ ವೇಳೆ ಕಾಣಿಯೂರಿನ ಬೆದ್ರಾಜೆಯಲ್ಲಿ ಮಧ್ಯಾಹ್ನ 2 ಗಂಟೆಯ ವೇಳೆಗೆ ಗುಂಪೊಂದು ಪಿಕಪ್ ವಾಹನವನ್ನು ರಸ್ತೆಗೆ  ಅಡ್ಡವಾಗಿಟ್ಟು ಮಾರಾಟಗಾರರ ಕಾರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ರಾಡ್ ನಿಂದ ಥಳಿಸಿ, ಕಾಲಿನಿಂದ ತುಳಿದು, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು  ಪೊಲೀಸರಿಗೆ ಈ ಸಂಬಂಧ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ದುಷ್ಕರ್ಮಿಗಳ ಗುಂಪು ಕಾರನ್ನು ಜಖಂಗೊಳಿಸಿದ್ದು, ಮಾರಾಟಕ್ಕಾಗಿ ತಂದಿದ್ದ ಬೆಡ್ ಶೀಟ್ ಗಳನ್ನು ಎಸೆದಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.  ಘಟನೆ ಸಂಬಂಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ