ಬಯಲಾಯ್ತು ಸಂಬಂಧಿಕನ ಇನ್ನೊಂದು ಮುಖ: ಹಣಕ್ಕಾಗಿ ಯುವಕನ ಬರ್ಬರ ಹತ್ಯೆ
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಯುವಕನೋರ್ವನನ್ನು ಸಂಬಂಧಿಕನೇ ಕೊಲೆಗೈದು ಆತ್ಮಹತ್ಯೆಯೆಂದು ಬಿಂಬಿಸಲು ಹೊರಟ್ಟಿದ್ದ ಪ್ರಕರಣವೊಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಆತ್ರಾಡಿ ಕುಕ್ಕೆಹಳ್ಳಿಯ ಕೃತಿಕ್ ಜೆ. ಸಾಲಿಯಾನ್ ಕೊಲೆಯಾದ ಯುವಕ. ಕೃತಿಕ್ ನ ದೂರದ ಸಂಬಂಧಿ ಬ್ರಹ್ಮಾವರದ ಹೋಟೇಲ್ ಉದ್ಯಮಿ ದಿನೇಶ್ ಸಫಲಿಗಾ ಕೊಲೆಗೈದ ಆರೋಪಿ.
ಸೆ.14 ರಂದು ಮನೆಯ ಅನತಿ ದೂರದ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೃತಿಕ್ ಮೃತದೇಹ ಪತ್ತೆಯಾಗಿತ್ತು.ಈ ಬಗ್ಗೆ ಕೃತಿಕ್ ಅತ್ತೆ ಶೈಲಜಾ ಕರ್ಕೇರಾ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿದಾಗ ದಿನೇಶ್ ಸಫಲಿಗಾ ಎಂಬಾತನು ಕೃತಿಕ್ ನನ್ನು ಹತ್ಯೆಗೈದ ವಿಚಾರ ಗೊತ್ತಾಗಿದೆ.
ಈ ಬಗ್ಗೆ ದಿನೇಶ್ ಸಫಲಿಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಿನೇಶನು ಕೃತಿಕ್ ನಿಂದ 9 ಲಕ್ಷ ಹಣದ ಪಡೆದಿದ್ದ. ಈ ನಡುವೆ ಹಣ ವಾಪಸ್ಸು ನೀಡಬೇಕಾಗುತ್ತದೆ ಎಂಬ ಉದ್ದೇಶದಿಂದ ಕೃತಿಕ್ ಗೆ ಮಹಿಳೆಯನ್ನು ಪರಿಚಯಿಸುವುದಾಗಿ ಹಾಡಿಗೆ ಕರೆದುಕೊಂಡು ಹೋಗಿ ಹತ್ಯೆಗೈದಿದ್ದಾನೆ ಎಂದು ಒಪ್ಪಿಕೊಂಡಿದ್ಧಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka