“ಯುವಕರನ್ನು ರೈಲ್ವೇ ಹಳಿ ಮೇಲೆ ಇಟ್ಟು ಕೊಲ್ಲುವ ಪ್ರಯತ್ನ ನಡೆದಿತ್ತು”: ವ್ಯಾಪಾರಿಗಳಿಗೆ ಹಲ್ಲೆ ಪ್ರಕರಣ - Mahanayaka
10:21 AM Thursday 12 - December 2024

“ಯುವಕರನ್ನು ರೈಲ್ವೇ ಹಳಿ ಮೇಲೆ ಇಟ್ಟು ಕೊಲ್ಲುವ ಪ್ರಯತ್ನ ನಡೆದಿತ್ತು”: ವ್ಯಾಪಾರಿಗಳಿಗೆ ಹಲ್ಲೆ ಪ್ರಕರಣ

kaniyuru case
22/10/2022

ದಕ್ಷಿಣ ಕನ್ನಡ ಜಿಲ್ಲೆಯ ಕಣಿಯೂರಿನಲ್ಲಿ ಇಬ್ಬರು ಯುವಕರ  ಕೊಲೆ ಯತ್ನ ಪ್ರಕರಣ ನಡೆದಿದೆ. ಇದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಹೇಳಿದ್ದಾರೆ.

ಅವರು ಇಂದು ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಇಬ್ಬರು ವ್ಯಕ್ತಿಗಳು ವ್ಯಾಪಾರಿ ಚೌಕಾಸಿ ಮಾಡಿ ಹೋಗಿದ್ದರು. ಇದೇ ವೇಳೆ ದುಷ್ಕರ್ಮಿಗಳು ಬರ್ಬರವಾಗಿ ಹಲ್ಲೆ ಮಾಡಿದ್ದಾರೆ. ಈ‌ ವೀಡಿಯೋ ವೈರಲ್ ಆಗಿದ್ದು, ಯಾರು ಈ ಕೃತ್ಯದಲ್ಲಿ ಇದ್ರು ಎಂಬುವುದು ಬಯಲಾಗಿದೆ. ವೀಡಿಯೋದಲ್ಲಿ ಮುಸ್ಲಿಮರು, ಬ್ಯಾರಿಗಳು ಎಂದು ನಿಂದಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ರೈಲ್ವೇ ಹಳಿ ಮೇಲಿಟ್ಟು ಅವರನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾರೆ.ಈ ಕೃತ್ಯದಲ್ಲಿ ಭಾಗವಹಿಸಿದ್ದು ಬಿಜೆಪಿಯವರು ಎಂದು ಗಂಭೀರವಾಗಿ ಆರೋಪಿಸಿದರು.

ರೌಡಿಶೀಟರ್ ನೋರ್ವ ಈ ಕೃತ್ಯದ ನೇತೃತ್ವ ವಹಿಸಿದ್ದ. ಇದನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ಯುಪಿ ಮಾಡೆಲ್ ನಂತಿದೆ. ಹಲ್ಲೆ ಮಾಡಿದ ಇಷ್ಟು ಆರೋಪಿಗಳ ಮೇಲೆ ಸಾಮಾನ್ಯ ಕೇಸ್ ಹಾಕಿ ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿಗಳು ತಿರುಗಾಡುತ್ತಿದ್ದಾರೆ. ಸಂತ್ರಸ್ತರ ಮೇಲೆ ಮಾನಭಂಗ ಯತ್ನ ಕೇಸ್ ಹಾಕಲಾಗಿದೆ ಎಂದ ಅವರು, ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಟಾವಂತ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನ್ಯಾಯ ಕೊಡಿಸುತ್ತಾರೆಂಬ ನಂಬಿಕೆ ಇದೆ. ಓವರ್ ಟೇಕ್ ವಿಶ್ಯದಲ್ಲಿ ಆದ ಗಲಾಟೆಯನ್ನು ಸಿಐಡಿಗೆ ವಹಿಸಲಾಗಿದೆ. ಕೂಡಲೇ ಈ ಕೊಲೆ ಯತ್ನ ಕೇಸನ್ನು ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿದರು. ಎಡಿಜಿಪಿ ಸ್ಥಳ ಪರಿಶೀಲನೆ ನಡೆಸಬೇಕು. ಇಂತಹ ಘಟನೆ ಮುಂದೆ ನಡೆಯದಂತೆ ನೋಡಿಕೊಳ್ಳಬೇಕು. ಏಕಾಏಕಿ ಬಿಜೆಪಿಯ 50 ರಿಂದ 60 ಗೂಂಡಾಗಳು ಈ ರೀತಿ ಹಲ್ಲೆ ಮಾಡಿದ್ರೆ ಮುಂದೆ ಜನರು ಹೇಗೆ ನಿರ್ಭೀತಿಯಿಂದ ಓಡುವುದು ಎಂದು ಪ್ರಶ್ನಿಸಿದರು. ಪೊಲೀಸರ ಕೆಲ್ಸವನ್ನು ಇವ್ರೇ ಮಾಡುವುದಾದ್ರೆ ಪೊಲೀಸ್ ಇಲಾಖೆ ಯಾಕೆ ಇರಬೇಕು ಎಂದು ಪ್ರಶ್ನಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ