ಮಲೆನಾಡು ಹತ್ತಿದ ದಕ್ಷಿಣ ಕನ್ನಡದ ಹುಲಿಗಳು: ದೀಪಾವಳಿಗೆ ಹುಲಿ, ಸಿಂಹ ಕರಡಿಗಳ ಅಬ್ಬರ
ಕೊಟ್ಟಿಗೆಹಾರ: ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಲೆನಾಡಿಗೆ ಕರಾವಳಿಯ ಹುಲಿವೇಷದ ತಂಡ ಆಗಮಿಸಿದ್ದು, ಮನೆ ಮನೆಗೆ ತೆರಳಿ ನೃತ್ಯ ಮಾಡುತ್ತಿರುವುದು ಕಂಡು ಬರುತ್ತಿದೆ.
ಹತ್ತು ಹದಿನೈದು ದಿನಗಳ ಹಿಂದಿನಿಂದಲೇ ಪಟ್ಟಣದ ಸುತ್ತಮುತ್ತ ದೀಪಾವಳಿ ಸಂಭ್ರಮ ಇಮ್ಮಡಿಗೊಳಸಲು ಪ್ರತಿ ವರ್ಷದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಂಪ್ರದಾಯಿಕ ಹುಲಿ ಮತ್ತು ಸಿಂಹವೇಷಧಾರಿಗಳ ತಂಡ, ಶಿವಮೊಗ್ಗದಿಂದ ಆಂಜನೇಯ ವೇಷಧಾರಿ, ಸ್ಥಳೀಯ ವಿವಿಧ ಕಲಾತಂಡಗಳು ಆಗಮಿಸಿ ಮನೆ ಮನೆಗೆ ಭೇಟಿ ನೀಡಿ ಮನರಂಜನೆ ನೀಡುತ್ತಿವೆ.
ವಿವಿಧೆಡೆಯಿಂದ ಬಂದಿರುವ ಸಾಂಪ್ರದಾಯಿಕ ವೇಷಧಾರಿಗಳು, ಸ್ಥಳೀಯ ಯುವಕರ ಕರಡಿ ಕುಣಿತ ಹಾಗೂ ಸ್ಥಳೀಯ ಗ್ರಾಮೀಣ ಪ್ರದೇಶದವರ ಜನಪದ ಹಾಡಿನ ಕಾರ್ಯಕ್ರಮವೂ ಎಲ್ಲ ಭಾಗಗಳಲ್ಲಿ ನಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka