ಆಂಜನೇಯನ ಮೂರ್ತಿಯ ತಲೆಗೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕ: ವ್ಯಾಪಕ ಆಕ್ರೋಶ
ದಾವಣಗೆರೆ: ಅರ್ಚಕನೋರ್ವ ಆಂಜನೇಯ ಸ್ವಾಮಿಯ ಮೂರ್ತಿಯ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ಅಸಭ್ಯ ಪೂಜೆ ಸಲ್ಲಿಸಿದ್ದು, ದೇವರ ಮೂರ್ತಿಯ ತಲೆಗೆ ಕಾಲಿಟ್ಟು ಪೂಜೆ ಮಾಡಿರುವ ಅರ್ಚಕ ಎಂದು ವರದಿಯಾಗಿದೆ.
ನೀವು ಪೂಜೆ ಮಾಡುವುದಿದ್ದರೆ ಮಾಡಿ, ಆದರೆ ಈ ರೀತಿಯಲ್ಲಿ ಜನರ ನಂಬಿಕೆಗಳಿಗೆ ಅವಮಾನ ಮಾಡಬೇಡಿ. ಲಕ್ಷಾಂತರ ಜನರು ನಂಬುವ ದೇವರ ಮೂರ್ತಿಗೆ ಕಾಲಿಟ್ಟು ದೇವರಿಗಿಂತಲೂ ನಾವು ಶ್ರೇಷ್ಠ ಅನ್ನೋದನ್ನು ಹೇಳಲು ಹೊರಟಿದ್ದೀರಾ? ಎನ್ನುವಂತಹ ಹಲವು ಆಕ್ರೋಶದ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ.
ಶ್ರೀರಾಮನ ಸೇವಕ ಹನುಮಂತನಿಗೆ ಈ ರೀತಿಯ ಅವಮಾನ ಮಾಡುತ್ತಿದ್ದರೂ ಇದೊಂದು ವಿವಾದಕ್ಕೀಡಾಗದೇ ಇರುವುದು ಅಚ್ಚರಿ ಸೃಷ್ಟಿಸಿದೆ. ಇದು ಹಿಂದಿನಿಂದಲೇ ಮಾಡಿಕೊಂಡು ಬಂದಿರುವ ಆಚರಣೆಯೇ? ಆಂಜನೇಯನಿಗೆ ಹಿಂದಿನಿಂದಲೂ ಈ ರೀತಿಯ ಅವಮಾನಗಳನ್ನು ಮಾಡಲಾಗುತ್ತಿತ್ತೇ? ಅನ್ನೋ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka