ಒಂದೇ ಮನೆಯ ಇಬ್ಬರು ಮಕ್ಕಳನ್ನು ಬಲಿಪಡೆದ ಜ್ವರ: ಮುಗಿಲು ಮುಟ್ಟಿದ ಪೋಷಕರ ರೋದನೆ
ಬೆಳ್ತಂಗಡಿ: ಮದ್ದಡ್ಕಗ್ರಾಮದ ಲಾಡಿ ಎಂಬಲ್ಲಿ ಒಂದೇ ಮನೆಯ ಇಬ್ಬರು ಮಕ್ಕಳು ಜ್ವರದಿಂದಾಗಿ ಮೃತಪಟ್ಟ ಘಟನೆ ಸಂಭವಿಸಿದೆ.
ಸ್ಥಳೀಯ ನಿವಾಸಿ ಅಬ್ಬಾಸ್ ಎಂಬವರ ಮಕ್ಕಳಾದ ಸಫಾನ್ (8)ಹಾಗೂ ಸಿನಾನ್ (4)ಎಂಬವರೇ ಮೃತ ಬಾಲಕರಾಗಿದ್ದಾರೆ.
ಮಕ್ಕಳಿಗೆ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯವಾಗಿ ಚಿಕಿತ್ಸೆ ಪಡೆದು ಮಕ್ಕಳು ಮನೆಯಲ್ಲಿಯೇ ಇದ್ದರು. ಈ ನಡುವೆ ಇಬ್ಬರು ಮಕ್ಕಳಿಗೂ ಜ್ವರ ತೀವ್ರವಾಗಿದ್ದು, ಬಳಿಕ ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆಗೆ ಸ್ಪಂದಿಸದೆ ಒರ್ವಬಾಲಕ ನಿನ್ನೆ ಮೃತ ಪಟ್ಟಿದ್ದು, ಇನ್ನೋರ್ವ ಬಾಲಕ ಮಂಗಳವಾರ ಮೃತಪಟ್ಟಿದ್ದಾನೆ. ಮನೆಯ ಇಬ್ಬರು ಮಕ್ಕಳನ್ನೂ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka