ಮನೆಯೊಳಗೆ ನುಗ್ಗಿದ ದೀಪಾವಳಿ ರಾಕೆಟ್: ಮನೆಗೆ ಆವರಿಸಿದ ಬೆಂಕಿ
ಪಟಾಕಿಯಿಂದ ಸಿಡಿದ ಕಿಡಿ ತಗುಲಿ ಮನೆಯೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ನಡೆದಿದೆ.
ರಾತ್ರಿ ಸಮಯದಲ್ಲಿ ಛತ್ರಮೈದಾನದಲ್ಲಿ ಪಟಾಕಿ ಸಿಡಿಸುತ್ತಿದ್ದ ವೇಳೆ ಹಾರಿದ ರಾಕೆಟ್ ವೊಂದು ಮನೆಯೊಂದರ ಮಹಡಿಯಲ್ಲಿ ಒಣ ಹಾಕಿದ್ದ ಬಟ್ಟೆಗೆ ತಗುಲಿದ್ದು ಬಟ್ಟೆಗೆ ಬೆಂಕಿ ಹಿಡಿದುಕೊಂಡು ಆ ಬೆಂಕಿ ಇಡಿ ಮನೆಗೆ ಆವರಿಸಿದೆ.
ಕೂಡಲೇ ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಮನೆಯಲ್ಲಿ ಆ ಸಮಯದಲ್ಲಿ ಯಾರು ಇಲ್ಲದೆ ಇರುವುದರಿಂದ ಪ್ರಾಣಾಪಾಯ ಆಗುವುದು ತಪ್ಪಿದಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka