ಗಂಧದ ಗುಡಿ: ಇದು ಅಪ್ಪು ಕೊನೆಯ ಚಿತ್ರವಲ್ಲ: ನಟ ಶಿವರಾಜ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಹಳ ಇಷ್ಟಪಟ್ಟು ಮಾಡಿರುವ ಗಂಧದ ಗುಡಿ ಸಾಕ್ಷ್ಯ ಚಿತ್ರ ಇಂದು ತೆರೆಕಂಡಿದೆ. ಅಭಿಮಾನಿಗಳು ಗಂಧದ ಗುಡಿ ಚಿತ್ರವನ್ನು ವೀಕ್ಷಿಸಿ ಪುನೀತ್ ರಾಜ್ ಕುಮಾರ್ ಅವರನ್ನು ಕಣ್ತಂಬಿಕೊಂಡಿದ್ದಾರೆ.
ಚಿತ್ರ ಬಿಡುಗಡೆಗೊಂಡ ಈ ಸಂದರ್ಭದಲ್ಲಿ ಚಿತ್ರ ವೀಕ್ಷಣೆಗೂ ಮೊದಲು ನಟ ಶಿವರಾಜ್ ಕುಮಾರ್ ಅವರು ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿದ್ದು, ಇದು ಅಪ್ಪು ಕೊನೆಯ ಚಿತ್ರವಲ್ಲ ಎಂದು ಹೇಳಿದ್ದಾರೆ.
ಇದು ಅಪ್ಪು ಕೊನೆಯ ಚಿತ್ರ ಅಲ್ಲ, ಇದು ಆರಂಭ. ಅಪ್ಪು ಯಾವಾಗಲೂ ನಮ್ಮ ಜೊತೆಗೆ ಇರುತ್ತಾರೆ ಎಂದು ಭಾವುಕರಾಗಿದ್ದಾರೆ.
ಗಂಧದ ಗುಡಿಯಲ್ಲಿ ಪ್ರಕೃತಿ ಬಗ್ಗೆ ಅಪ್ಪಾಜಿ ತಿಳಿಸಿದ್ರು. ಇದರಿಂದ ಅದೆಷ್ಟೋ ಜನರಿಗೆ ಪ್ರೇರಣೆಯಾಗಿದ್ದರು. ನಾನು ಗಂಧದ ಗುಡಿ ಪಾರ್ಟ್ 2 ಮಾಡಿದ್ದೆ. ಅಪ್ಪು ಕಾಡಿನ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಅಪ್ಪುವನ್ನು ನೀಡಲು ಅಭಿಮಾನಿಗಳು ಬರಬೇಕು. ಈ ಮೂಲಕ ಅವರಿಗೆ ಗೌರವ ಕೊಡಬೇಕು ಎಂದು ಶಿವಣ್ಣ ಮನವಿ ಮಾಡಿಕೊಂಡರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka