ಲಂಗರು ಹಾಕಿದ್ದ 3ಕ್ಕೂ ಅಧಿಕ ಬೋಟ್ ಗಳು ಬೆಂಕಿಗಾಹುತಿ
ಮಂಗಳೂರು: ಲಂಗರು ಹಾಕಿದ್ದ 3ಕ್ಕೂ ಅಧಿಕ ಬೋಟ್ ಗಳು ಬೆಂಕಿಗಾಹುತಿಯಾದ ಘಟನೆ ಇಂದು ಸಂಜೆ ಮಂಗಳೂರು ನಗರದ ಬೆಂಗ್ರೆ ಪ್ರದೇಶದಲ್ಲಿ ನಡೆದಿದೆ.
ಬೆಂಗರೆಯಲ್ಲಿ ಹಲವು ಬೋಟ್ ಗಳು ಲಂಗರು ಹಾಕಿರುತ್ತವೆ. ಈ ಪೈಕಿ ಒಂದು ಬೋಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
ಬೆಂಕಿ ತಗಲಿದ್ದ ಬೋಟ್ ಗಳ ಹತ್ತಿರಲ್ಲಿದ್ದ ಇತರ ಬೋಟ್ ಗಳಿಗೂ ಬೆಂಕಿ ಹಬ್ಬಿದ್ದು, ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವುದು ಕಂಡುಬಂದಿದೆ.
ಬೆಂಕಿಯ ಅಬ್ಬರಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿ, ಆತಂಕದಿಂದ ನೋಡುತ್ತಿರುವ ದೃಶ್ಯ ಕಂಡು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka