ಮನೆಯಲ್ಲಿ ಚಿನ್ನ ಕಳ್ಳತನ: 6 ತಿಂಗಳಲ್ಲಿ ಕೇರಳದ ಮೂಲದ ಆರೋಪಿಯ ಬಂಧನ - Mahanayaka
10:29 PM Sunday 15 - December 2024

ಮನೆಯಲ್ಲಿ ಚಿನ್ನ ಕಳ್ಳತನ: 6 ತಿಂಗಳಲ್ಲಿ ಕೇರಳದ ಮೂಲದ ಆರೋಪಿಯ ಬಂಧನ

mahammad k u
30/10/2022

ಮನೆಯೊಂದರಲ್ಲಿ ಚಿನ್ನ ಕಳ್ಳತನ ಮಾಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೇರಳ ರಾಜ್ಯದ ತಳಿಪರಂಬದ 42 ವರ್ಷದ ಮಹಮ್ಮದ್‌ ಕೆ.ಯು. ಎಂದು ಗುರುತಿಸಲಾಗಿದೆ.  ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ  ಹಂಝ ಮುರ ಉಮ್ಮರ್‌ ಎಂಬುವವರ ಮನೆಯಲ್ಲಿ ಸಂಬಂಧಿಕರು ಹಾಗೂ ಮನೆಯವರು ಮನೆಯಲ್ಲಿ ಇರುವಾಗಲೇ ಮಾರ್ಚ್ 9 ರ ರಾತ್ರಿ ಸಮಯ 11 ಗಂಟೆಯಿಂದ ದಿನಾಂಕ 10-03-2022 ರಂದು ಬೆಳಗ್ಗಿನ ಜಾವ 4 ಗಂಟೆಯ ಸಮಯ ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಒಟ್ಟು 107 ಗ್ರಾಂ ನಷ್ಟು ಚಿನ್ನವನ್ನು ಕಳ್ಳತನ ಮಾಡಲಾಗಿತ್ತು.

ಕಳವಾಗಿದ್ದ ಇದರ ಅಂದಾಜು ಮೌಲ್ಯ 4,28,000 ರೂಪಾಯಿ ಆಗಿತ್ತು. ಈ ಕುರಿತು  ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್‌  ಠಾಣಾ ಅಕ್ರ 38/2022 ಕಲಂ 457 380  ಐಪಿಸಿಯಂತೆ  ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಆರೋಪಿಯನ್ನು ವಶಕ್ಕೆ ಪಡೆದು ಅದರಂತೆ ಈ ಮೇಲಿನ ಪ್ರಕರಣದ ಬಗ್ಗೆ ವಿಚಾರಿಸಿದಾಗ ಕಳ್ಳತನವಾದ ಸ್ವತ್ತುಗಳನ್ನು ಕಾಸರಗೂಡಿನಲ್ಲಿ ಮಾರಾಟ ಮಾಡಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿದ್ದು ಅದರಂತೆ ಕಳವು ಮಾಲನ್ನು ಕಾಸರಗೂಡಿನ ಜುವ್ಯೆಲರಿ ಅಂಗಡಿಯಿಂದ ಸುಮಾರು 80.10 ಗ್ರಾಂ ನಷ್ಟು ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಇದರ ಅಂದಾಜು ಮೌಲ್ಯ 3,71,600/-ರೂಪಾಯಿ ಆಗಬಹುದು. ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ