ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿ: ಮಹಿಳಾ ಹೋರಾಟಗಾರ್ತಿ ಜ್ಯೋತಿ ಒತ್ತಾಯ - Mahanayaka
2:53 PM Wednesday 11 - December 2024

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿ: ಮಹಿಳಾ ಹೋರಾಟಗಾರ್ತಿ ಜ್ಯೋತಿ ಒತ್ತಾಯ

jothi g
03/11/2022

ಕಬ್ಬಿನ ಗದ್ದೆಯಲ್ಲಿ 15 ವರ್ಷದ ಬಾಲಕಿ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಕೇಳಿ ಅತೀವ ನೋವು ಉಂಟಾಗಿದೆ. ಅತ್ಯಾಚಾರ ಮಾಡಿ ಕೊಲೆ ಮಾಡುವ ಅಮಾನವೀಯ ಕೃತ್ಯಗಳು ನಿರಂತರವಾಗಿ ನಡೆಯುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದು ಮಹಿಳಾ ಹೋರಾಟಗಾರ್ತಿ, ಮೈಸೂರಿನ ಶಿಕ್ಷಕಿ ಜ್ಯೋತಿ ಜಿ. ಬೇಸರ ವ್ಯಕ್ತಪಡಿಸಿದ್ದಾರೆ.

ಇಂತಹ ಕೃತ್ಯಗಳು ಪದೇ ಪದೇ ನಡೆಯುತ್ತಿರುವುದರಿಂದ ಹೆಣ್ಣು ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಕ್ಷಣಿಕದ ಸುಖಕ್ಕಾಗಿ ಮಗ್ದ ಮಕ್ಕಳ ಹಾಗೂ ಮಹಿಳೆಯರು ಬಲಿಯಾಗುತ್ತಿರುವುದು ಖಂಡನೀಯವಾಗಿದೆ. ಕೆಲವರು ಜೀವನ ಪರ್ಯಂತ ಅಸ್ವಸ್ಥರಾಗಿ ಸಾವಿಗೆ ಶರಣಾಗುತ್ತಾರೆ. ಬದುಕನ್ನು ರೂಪಿಸಿಸಬೇಕಾದ ಗುರುಗಳು, ತಂದೆ  ಅಥವಾ ಸಂಬಂಧಿಕರಿಂದಲೇ ಇಂತಹ ನೀಚ ಕೃತ್ಯಗಳು ನಡೆಯುತ್ತಿವೆ ಎಂದು ಕೇಳಲು ಅಸಹ್ಯವಾಗುತ್ತಿದೆ ಎಂದು ಅವರು ಹೇಳಿದರು.

ಸೌದಿ ಅರೇಬಿಯಾದಲ್ಲಿ ಅತ್ಯಾಚಾರಗಳಿಗೆ ನೀಡುವ ಕಠಿಣ ಶಿಕ್ಷೆಯನ್ನು ನಮ್ಮ ಭಾರತ ದೇಶದಲ್ಲೂ ಅನುಷ್ಠಾನಕ್ಕೆ ತರುವಲ್ಲಿ ಸರಕಾರ ಮುಂದೆ ಬರಬೇಕು ಎಂದ ಅವರು, ಅತ್ಯಾಚಾರಿಗಳು ಪ್ರಬಲರಾಗಿದ್ದರೆ, ಅವರನ್ನು ಕೆಲವು ದಿನ ಜೈಲಿನಲ್ಲಿ ಇಟ್ಟು ಬಳಿಕ ಬಿಡುಗಡೆ ಮಾಡುವಂತಹದ್ದು ನಡೆಯಬಾರದು. ಇದರಿಂದ ಅತ್ಯಾಚಾರ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊರತು ಅತ್ಯಾಚಾರಿಗಳು ಪ್ರಸಿದ್ಧರ ಪರದವರಾದರೆ, ಅವರ ಕೆಲವೇ ದಿನಗಳಿಗೆ ಜೈಲಿನಲ್ಲಿ ಇಟ್ಟು ಬಿಡುಗಡೆ ಮಾಡುವುದಲ್ಲ. ಇದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಸರಕಾರ ಬೇಕು ಎಂಬ, ಉಪನ್ಯಾಸಕಿ ಜ್ಯೋತಿ, ಜಿ. ಮೈಸೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ