ಮಗುವನ್ನು ಆಸ್ಪತ್ರೆಗೆ ಕರೆದೊಯ್ಯ ಬೇಕು ಫೈನ್ ಕಟ್ಟಲು ಹಣ ಇಲ್ಲ ಎಂದರೂ ಬಿಡದ ಟ್ರಾಫಿಕ್ ಪೊಲೀಸರು!
ಮಂಡ್ಯ: ಮಗುವನ್ನು ಬೈಕ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಂಪತಿಯನ್ನು ತಡೆದ ಪೊಲೀಸರು ಹೆಲ್ಮೆಟ್ ಹಾಕಿಲ್ಲ ಫೈನ್ ಕಟ್ಟಿ ಎಂದು ಬೈಕ್ ನ ಕೀಯನ್ನೂ ಕಿತ್ತು ಕೊಂಡು ಅಮಾನವೀಯತೆ ಮೆರೆದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ನಗರದ ಮಹಾವೀರ ವೃತ್ತದ ಬಳಿಕ ಕೆ.ಆರ್.ಪೇಟೆಯಿಂದ ಮಂಡ್ಯ ಮೀಮ್ಸ್ ಆಸ್ಪತ್ರೆಗೆ ದಂಪತಿ ಮಗುವನ್ನು ಕರೆದುಕೊಂಡುತ್ತಿದ್ದರು. ಈ ವೇಳೆ ಪೊಲೀಸರು ಬೈಕ್ ತಡೆದಿದ್ದಾರೆ. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಿದೆ, ಕೈಯಲ್ಲಿ ಹಣ ಇಲ್ಲ ಸರ್, ಬಿಟ್ಟು ಬಿಡಿ ಎಂದು ಅಂಗಲಾಚಿದರೂ ಟ್ರಾಫಿಕ್ ಪೊಲೀಸರು, ಮೊದಲು ಫೈನ್ ಕಟ್ಟು ಆ ಮೇಲೆ ಬೈಕ್ ಕೀ ಕೊಡುತ್ತೇವೆ ಎಂದು ಹೇಳಿದ್ದಾರೆ.
ಇತ್ತ ಪೊಲೀಸರು ಬೈಕ್ ತಡೆದ ಹಿನ್ನೆಲೆಯಲ್ಲಿ ವ್ಯಕ್ತಿಯ ಪತ್ನಿ ಮಗುವನ್ನು ಹಿಡಿದುಕೊಂಡು ಫುಟ್ಪಾತ್ ನಲ್ಲಿ ಕುಳಿತುಕೊಳ್ಳುವಂತಾಗಿತ್ತು. ಕೊನೆಗೆ ಸ್ನೇಹಿತನ ಕೈಯಿಂದ ಗೂಗಲ್ ಪೇ ಮಾಡಿಸಿಕೊಂಡ ವ್ಯಕ್ತಿ ಎಟಿಎಂಗೆ ತೆರಳಿ ಫೈನ್ ಕಟ್ಟಿದ ಮೇಲೆ ಪೊಲೀಸರು ಬೈಕ್ ಕೀ ಕೊಟ್ಟಿದ್ದಾರೆ.
ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಫೈನ್ ಹಾಕಬೇಕು ಅನ್ನೋದು ನಿಜ ಆದರೆ, ಫೈನ್ ಆ ಸ್ಥಳದಲ್ಲಿ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಕೇಸು ದಾಖಲಿಸಿ ವಾಹನ ಬಿಡಬಹುದಿತ್ತು. ಆ ಬಳಿಕ ಅವರೇ ಫೈನ್ ಕಟ್ಟುತ್ತಿದ್ದರು. ಆದರೆ, ಬೈಕ್ ಕೀ ಎತ್ತಿಕೊಂಡು ರಸ್ತೆ ಬದಿಯಲ್ಲಿ ತಾಯಿ—ಮಗುವನ್ನು ಕೂರಿಸಿ ಹಿಂಸಿಸುವುದು ಸರಿಯೇ? ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದವು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka